ಕುಕ್ಕಾಜೆಯ ಅಯ್ಯಪ್ಪ ಭಕ್ತವೃಂದ, ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ ಹಾಗೂ ಅಯ್ಯಪ್ಪ ದೀಪೋತ್ಸವ ಸಮಿತಿ, ಮಂಚಿ ಕುಕ್ಕಾಜೆ ಇರಾ ಅಯ್ಯಪ್ಪ ವ್ರತಧಾರಿಗಳ 50ನೆ ವರ್ಷದ ವ್ರತಾಚರಣೆ ಪ್ರಯುಕ್ತ ಅಯ್ಯಪ್ಪ ದೀಪೋತ್ಸವ, ಅಪ್ಪ ಸೇವೆ, ಕೆಂಡಸೇವೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಸಿದ್ದಿವಿನಾಯಕ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ.
ಈ ವಿಷಯವನ್ನು ದೀಪೋತ್ಸವ ಸಮಿತಿ ಅಧ್ಯಕ್ಷ ಮಾಧವ ಮಾವೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ಭಜನಾ ಸೇವೆ, ಗಣಹೋಮ, ಗುರುವಂದನಾ ಕಾರ್ಯಕ್ರಮ, ಸಂಜೆ ಭಜನಾ ಮಂಗಲ, ದೀಪೋತ್ಸವ, ಅಪ್ಪ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ಯಕ್ಷಗಾನ ಬಯಲಾಟ, ಕೆಂಡಸೇವೆ ನಡೆಯಲಿದೆ ಎಂದರು. ಸಭಾ ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಸಹಿತ ಪ್ರಮುಖರು ಭಾಗವಹಿಸುವರು. ಧಾರ್ಮಿಕ ಉಪನ್ಯಾಸವನ್ನು ಉದಯ ಗುರುಸ್ವಾಮಿ ಮಂಜೇಶ್ವರ ನೀಡುವರು ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ರಮೇಶ್ ರಾವ್ ಪತ್ತುಮುಡಿ, ಸಂಜೀವ ಆಚಾರ್ಯ, ಗುರುಸ್ವಾಮಿ ಸದಾಶಿವ ಆಚಾರ್ಯ, ಗುರುಸ್ವಾಮಿ ಕೃಷ್ಣಪ್ಪ ಬೆಳ್ಚಾಡ ಉಪಸ್ಥಿತರಿದ್ದರು