ವಿಟ್ಲ ಶೋಕಮಾತೆಯ ಇಗರ್ಜಿಯಲ್ಲಿ ರಚಿಸಿದ ಆಕರ್ಷಕ ಕ್ರಿಸ್ಮಸ್ ಗೋದಲಿ
ವಿಟ್ಲದ ಶೋಕ ಮಾತೆಯ ಇಗರ್ಜಿಯ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಬಲಿ ಪೂಜೆ ನೆರವೇರಿಸಿದರು. ಅತಿಥಿ ಧರ್ಮ ಗುರುಗಳಾಗಿ ಬೊನವೆಂಚರ್ ರೋಡ್ರಿಗಸ್ ಮತ್ತು ಮಾರ್ಸೆಲ್ ರೋಡ್ರಿಗಸ್ ಹಾಗೂ ವಿಟ್ಲ ಚರ್ಚ್ ನ ಧರ್ಮ ಗುರು ಐವನ್ ಮೈಕಲ್ ರೋಡ್ರಿಗಸ್ ಸಹಕರಿಸಿದರು. ವಿಟ್ಲ ಚರ್ಚ್ ಅಧೀನ ಕ್ಕೆ ಒಳಪಟ್ಟ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.