ದ್ವೇಷ ಭಾಷಣ ಕಾಯಿದೆಯನ್ನು ಬಿಜೆಪಿ ವಿರುದ್ಧ ಬಳಕೆಗೆ ಉಪಯೋಗಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಆರೋಪಿಸಿದ್ದಾರೆ.
ದ್ವೇಷ ಭಾಷಣದ ಮಸೂದೆ ಅಂಗೀಕಾರ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ.ರೋಡಿನ ಫ್ಲೈವರ್ ಅಡಿಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಈಗಾಗಲೇ ಬಿ.ಎನ್.ಎಸ್. ಕಾಯ್ದೆಯಲ್ಲಿ ಸಾಕಷ್ಟು ಅವಕಾಶಗಳಿದ್ದಾಗಲೂ ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ಸರಕಾರ ಹೊರಟಿದ್ದು ಸರಿಯಲ್ಲ ಎಂದು ದೂರಿದರು.
ಪ್ರಮುಖರಾದ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಾಂಗ್ರಸ್ ಸರಕಾರ ಜನಬೆಂಬಲ ಕಳೆದುಕೊಂಡಿದೆ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದರು.
ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್ ಮಾತನಾಡಿ, ಆಸ್ಪತ್ರೆಯನ್ನು ಕೆಳದರ್ಜೆಗೆ ತರುವ ಪ್ರಯತ್ನಗಳು ಆಗುತ್ತಿದ್ದು, ಇವುಗಳನ್ನು ಗಮನಿಸಬೇಕಾದ ಸರಕಾರ ದ್ವೇಷಭಾಷಣ ತಡೆಯಂಥ ಕಾಯ್ದೆ ಜಾರಿಗೆ ಹೊರಟಿದೆ ಎಂದರು.
ಪಕ್ಷ ಪ್ರಮುಖರಾದ ಸಂದೇಶ್ ಶೆಟ್ಟಿ ಮಾತನಾಡಿ, ಸರಕಾರ ಕಾಂಗ್ರೆಸ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಾಗಲಿಂದ ನಮ್ಮ ಸಂಸ್ಕೃತಿಯನ್ನು ದಮನಿಸುವ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಮದಾಸ ಬಂಟ್ವಾಳ, ಡೊಂಬಯ್ಯ ಅರಳ ಸಹಿತ ಪ್ರಮುಖರು ಹಾಜರಿದ್ದರು. ಕ್ಚೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಕಾರ್ಯಕ್ರಮ ನಿರ್ವಹಿಸಿದರು