ಬಾಲಗೋಕುಲದಲ್ಲಿ ವಿವಿಧ ಚಟುವಟಿಕೆ ಹಾಗೂ ಆಟಗಳ ಮೂಲಕ ಮಕ್ಕಳಲ್ಲಿ ಸಹಕಾರ,ಸಹಬಾಳ್ವೆ,ಸಮಾನತೆಯ ಶಿಕ್ಷಣ ವನ್ನು ನೀಡಲಾಗುತ್ತದೆ.ವೈಜ್ಞಾನಿಕ ಮನೋಭಾವ, ಭಾರತೀಯ ಸಂಸ್ಕೃತಿಯ ಮೂಲಕ ಸತ್ಪ್ರಜೆಗಳನ್ನು ನಿರ್ಮಿಸುವ ಆಂದೋಲನವಾಗಿ ಬಾಲಗೋಕುಲಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಶ್ಚಂದ್ರ ಕಳಂಜ ಹೇಳಿದರು.
ಅವರು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸೇವಾ ಭಾರತಿ ಬಂಟ್ವಾಳ ತಾಲೂಕು ಗೋಕುಲೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾದ ತಾಲೂಕಿನ ಬಾಲಗೋಕುಲಗಳ ಸಮ್ಮಿಲನ ಗೋಕುಲೋತ್ಸವ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಚಾಲಕ ಯಶವಂತ ಮುಲ್ಕಿ, ಸೇವಾ ಭಾರತಿ ಟ್ರಸ್ಟ್ ನ, ಜಿ.ಕೆ.ಭಟ್, ಪಿ.ಕೆ.ಪದ್ಮನಾಭ ಟ್ರಸ್ಟ್ ಉಪಸ್ಥಿತರಿದ್ದರು.
ಪೂರ್ವಾಹ್ನ ಭವ್ಯ ಶೋಭಾಯಾತ್ರೆಗೆ ಬಿಸಿರೋಡು ಕೈಕಂಬದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ವಿಭಾಗ ಸೇವಾ ಪ್ರಮುಖ ಡಾ.ಮನೋಜ್ ಸುಳ್ಯ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ರಮೇಶ ಉಪಾಧ್ಯಾಯ ,ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಕೋಶಾಧಿಕಾರಿ ಅಜಯ ಕೊಂಬ್ರಬೈಲು, ವಿನಾಯಕ ಬಿಸಿರೋಡು, ಸತೀಶ ಪಲ್ಲಮಜಲು, ಸತೀಶ ಶೆಟ್ಟಿ ಮೊಡಂಕಾಪು, ಹರಿಶ್ಚಂದ್ರ ಫರಂಗಿಪೇಟೆ, ಶುಭಲಕ್ಷ್ಮೀ ಕರ್ಪೆ, ಅಶ್ವಿನಿ ಎಡ್ತೂರು ಮೊದಲಾವರು ಉಪಸ್ಥಿತರಿದ್ದರು. ಲತಾ ತುಂಬೆ ಸ್ವಾಗತಿಸಿ ದರು. ತಪಸ್ವಿನಿ ಪಚ್ಚಿನಡ್ಕ ವಂದಿಸಿದರು. ವರ್ಷ ಮಾತಾಜಿ ನಿರೂಪಿಸಿದರು.