ಬಂಟ್ವಾಳ: ನಿಸ್ವಾರ್ಥ ಸೇವಕರು ನಮ್ಮ ಸಮಾಜದಲ್ಲಿ ಇದ್ದಾರೆ ಅವರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದು ಸಿದ್ದಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ನುಡಿದರು.
ಸತ್ಯದೇವತಾ ಸಭಾಂಗಣ ಕಣಪಾದೆಯಲ್ಲಿ ನಡೆದ ಮಾತೃಭೂಮಿ ಸೇವಾ ಸಂಘ ನಾವೂರು ದ್ವೀತಿಯ ವಾರ್ಷಿಕೋತ್ಸವ ಹಾಗೂ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾಜ ಸೇವಕರಾದ ರವಿ ಕಟಪಾಡಿ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅರ್ಜುನ್ ಭಂಡಾರ್ಕಾರ್ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದರು. ಸಾಮಾಜಿಕ ಮುಖಂಡ ಖಾಲಿದ್ ನಂದಾವರ ಅಧ್ಯಕ್ಷತೆ ವಹಿಸಿದ್ದರು. ಅಶ್ವಥ್ ಬರಿಮಾರು ಸಾರ್ವಕರ್ ಹಾಗೂ ರಾಷ್ಟ್ರೀಯತೆ ವಿಷಯದ ವಿಚಾರ ಮಂಡನೆ ಮಾಡಿದರು. ಗಣೇಶ್ ಯುವ ಶಕ್ತಿ ಸೇವಾ ಪಥ
ಅತಿಥಿಯಾಗಿದ್ದರು. ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ, ಸತ್ಯ ದೇವತೆ ಗೆಳೆಯರ ಬಳಗ ಕಣಪಾದೆಯ ಅಧ್ಯಕ್ಷರಾದ ಸದಾನಂದ ಹಳೆಗೇಟು, ಮಾತೃಭೂಮಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಹಾಗೂ ಪಂಚಾಯತ್ ಸದಸ್ಯರಾದ ವಿಜಯ್ ಉಪಸ್ಥಿತರಿದ್ದರು. ಪೌರ ಕಾರ್ಮಿಕರ ಜೊತೆಗೆ, ಮಾಜಿ ಸೈನಿಕರನ್ನು ಹಾಗೂ ಸಮಾಜ ಸೇವಕರನ್ನು ವೈದ್ಯರು ಹಾಗೂ ದಾದಿಯರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತ್ಯ ದೇವತೆ ನೃತ್ಯ ಕಲಾ ತಂಡದ ವತಿಯಿಂದ ಮಾತೃಭೂಮಿಗೆ ನಮನ ಕಾರ್ಯಕ್ರಮ ಹಾಗೂ ಸ್ಪಂದನ ಕಲಾವಿದರ್ ಬಂಟ್ವಾಳ ಇವರಿಂದ ಜಾಗೃತಿಯ ಸಂದೇಶ ಸಾರುವ ಸಾದಿ ತಿಕ್ಕುಜಿ ನಾಟಕ ಪ್ರದರ್ಶನಗೊಂಡಿತು. ಜಗದೀಶ್ ಕಕ್ಕಿಂಜಿ ಇವರು ಪ್ರಾರ್ಥಿಸಿ, ಸಂಘ ನಿರ್ದೇಶಕರಾದ ಸುರೇಶ್. ಎಸ್ ನಾವೂರು ಸ್ವಾಗತಿಸಿ ಕಾರ್ಯದರ್ಶಿ ಲೋಹಿತ್ .ಕೆ.ವಂದಿಸಿದರು. ಎಂ.ಕೆ..ಕನ್ಯಾಡಿ ನಿರೂಪಿಸಿದರು