ಸಿದ್ಧಕಟ್ಟೆಯ ಸ್ವಸ್ತಿಕ್ ಜೈನ್ ಯುವಜನ ಸಂಘಟನೆ ನೂತನ ಸಾಲಿನ ಪದಗ್ರಹಣ ಕಾರ್ಯಕ್ರಮ ಸಿದ್ಧಕಟ್ಟೆಯ ಸ್ವಸ್ತಿಕ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವೀರೇಂದ್ರ ಎಂ.ಸಿದ್ಧಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಶುಶಾಂತ್, ಕೋಶಾಧಿಕಾರಿಯಾಗಿ ಪ್ರಾಣೇಶ್ ಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದರು. ಉಜಿರೆ ಎಸ್.ಡಿ.ಎಂ. ನಿವೃತ್ತ ಪ್ರಿನ್ಸಿಪಾಲ್ ಡಾ. ಎ.ಜಯಕುಮಾರ ಶೆಟ್ಟಿ ಪದಪ್ರದಾನ ಮಾಡಿದರು.
ಉಪಾಧ್ಯಕ್ಷರುಗಳಾದ ಅವನ್, ಸಚಿನ್ ಹೆಗ್ಡೆ, ವಿವೇಕ್ ರಾಜ್, ಪ್ರಜೋತ್, ಜೊತೆ ಕಾರ್ಯದರ್ಶಿ ಅಕರ್ಷ್ ಜೈನ್, ಸಂಸ್ಕೃತಿಕ ಕಾರ್ಯದರ್ಶಿ ಸುಮನ್ ಜೈನ್, ಕ್ರೀಡಾ ಕಾರ್ಯದರ್ಶಿ ಯಾಗಿ ಮನೀಷ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಗೌರವ ಸಲಹೆಗಾರರು ಹಾಗೂ ಪೂರ್ವಾಧ್ಯಕ್ಷರ ಮಂಡಳಿ ಸದಸ್ಯರಾದ ವಿನಯಚಂದ್ರ ಜೈನ್, ಡಾ. ಸುದೀಪ್, ಮದ್ವರಾಜ್ ಜೈನ್, ಪಾಂಡಿರಾಜ್ ಜೈನ್, ಅಶೋಕ್ ಜೈನ್, ಸುಜನ್ ಜೈನ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಅನಂತಪದ್ಮ ಮಹಿಳಾ ಸಂಘದ ಅಧ್ಯಕ್ಷರಾದ ಪ್ರೇಮ, ಅರ್ಕಕೀರ್ತಿ ಇಂದ್ರ, ಜಯರಾಜ್ ಪುತ್ತಿಲ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳನ್ನು ನಿಯೋಜಿತ ಅಧ್ಯಕ್ಷರಾದ ವೀರೇಂದ್ರ ಎಂ ಸಿದ್ದಕಟ್ಟೆ ಸ್ವಾಗತಿಸಿದರು. ಆಕರ್ಷ್ ಜೈನ್ ವಂದಿಸಿದರು. ಸುಜನ್ ಜೈನ್ ಕಾರ್ಯಕ್ರಮ ನಿರೂಪಿಸಿದರು
| ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ (more…)