ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಕಾಂಕ್ರೀಟ್ ರಸ್ತೆಗಳನ್ನು ಮಾಜಿ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆ ಮಾಡಿದರು.
ನಾಲ್ಕನೇ ವಾರ್ಡ್ ನಲ್ಲಿ ಹಸನ್ ಬಾವಮನೆ ಬಳಿ ಯಿಂದ ಹಸನಬ್ಬ ಮನೆತನಕ ರಸ್ತೆ, ಪಣೋಲಿಬೈಲ್ ದೈವಸ್ಥಾನ ಪಕ್ಕ ದಿಂದ ಮನೋಜ್ ಮನೆತನಕ ರಸ್ತೆ, ಅಬೂಬಕ್ಕರ್ ಮನೆ ಬಲಿಯಿಂದ ಯೂನುಸ್ ಮನೆ ತನಕ ರಸ್ತೆ, ಪಂಚಾಯತ್ ಅಧ್ಯಕ್ಷರಾದ ಶೋಭ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಫೌಝಿಯರವರ ಪ್ರಯತ್ನ ದಿಂದ ನಿರ್ಮಾಣ ಗೊಂಡ ರಸ್ತೆಯನ್ನು ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಲೂಕ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಫೌಝಿಯ, ಪಂಚಾಯತ್ ಸದಸ್ಯರಾದ ಯಮುನ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ, ಕಾರ್ಯದರ್ಶಿಗಳಾದ ಗಿರೀಶ್ ಪೆರ್ವ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಯರಾದ ಪುಷ್ಪವಾತಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ಗಣಪತಿ ಭಟ್ ಕೊ ಮಾಲಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಪ್ ಜಾಡಕೋಡಿ, ಬಂಟ್ವಾಳ ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ, ಯುವ ನಾಯಕ ಸ್ಟೀವನ್ ಬೊಳ್ಳಯಿ ನಂದಾವರ ದೆವಸ್ಥಾನದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮನೋಜ್, ಪಣೋಲಿಬೈಲ್, ಶಿವಾನಂದ ಪಣೋಲಿಬೈಲ್, ರೈಮಂಡ್ ಅಂದ್ರದೆ, ವಿಲ್ಸನ್ ಬೊಳ್ಳ ಯಿ, ಖಳಂದರ್ ಬೊಳ್ಳಯಿ ನಾಲ್ಕನೇ ವಾರ್ಡಿನ ಬೂತ್ ಅಧ್ಯಕ್ಷರಾದ ಹನೀಫ್ ನೆನಪಿರಲಿ, ಐದನೇ ವಾರ್ಡಿನ ಬೂತ್ ಅಧ್ಯಕ್ಷರಾದ ರಿಯಾಝ್ ಪಟ್ಟುಗುಡ್ಡೆ, ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ ರಝಾಕ್, ಸುಲೈಮಾನ್ ಜಾಡಕೋಡಿ ,ಹಸನ್ ಜಾಡಕೋಡಿ ಸಲ್ಮಾನ್ ಬೊಳ್ಳಯಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.