ಬಂಟ್ವಾಳ: ಕೃಷಿಕರು ಮತ್ತು ಸ್ಥಳೀಯ ಗ್ರಾಮಸ್ಥರು ಒಟ್ಟುಗೂಡಿ ಮನೋರಂಜನೆ ಜೊತೆಗೆ ಧಾರ್ಮಿಕವಾಗಿ ನಂಬಿಕೆಗೆ ಪೂರಕವಾಗಿ ಮಾಗಣೆ ದೇವರು ಮತ್ತು ದೈವಗಳ ಅನುಗ್ರಹ ಪಡೆಯುವ ನಿಟ್ಟಿನಲ್ಲಿ ಕಂಬಳ ನಿರಂತರವಾಗಿ ನಡೆಯುವ ಅಗತ್ಯವಿದೆ ಎಂದು ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಹೇಳಿದ್ದಾರೆ.
ಇಲ್ಲಿನ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಭಾನುವಾರ ಬೆಳಿಗ್ಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಡ್ಯಾರಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಧರ್ಮದರ್ಶಿ ಎ.ಜೀವಂದರ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,
ಪಿಡಿಒ ಗಣೇಶ್ ಶೆಟ್ಟಿ ಆರಂಬೋಡಿ ಶುಭ ಹಾರೈಸಿದರು. ರಾಯಿ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಬ್ಯಾಂಕ್ ಅಧಿಕಾರಿ ಸಂತೋಷ್ ಕುಮಾರ್ ಚೌಟ, ಸಮಿತಿ ಗೌರವಾಧ್ಯಕ್ಷ ಜಗತ್ಪಾಲ ಶೆಟ್ಟಿ ಉಮನೊಟ್ಟು, ಸಂಜೀವ ಶೆಟ್ಟಿ ಗುಂಡ್ಯಾರು, ಕೆ ಎಂ ಎಫ್ ನಿರ್ದೇಶಕ ಪ್ರಭಾಕರ ಹುಲಿಮೇರು,
ಕೃಷಿಕ ಚಂದ್ರಶೇಖರ ಗೌಡ, ಓಟಗಾರ ಆನಂದ ಶೆಟ್ಟಿ ಹಕ್ಕೇರಿ, ಕುಟ್ಟಿ ಶೆಟ್ಟಿ ಹಕ್ಕೇರಿ, ಕರಿಯಣ್ಣ ಶೆಟ್ಟಿ ಹಕ್ಕೇರಿ, ದಿನೇಶ್ ಹುಲಿಮೇರು, ಸ್ಥಳದಾನಿ ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಪಶು ವೈದ್ಯಾಧಿಕಾರಿ ಡಾ. ಬಾಲಕೃಷ್ಣ, ಪ್ರಮುಖರಾದ ಸುಧಾಕರ ಚೌಟ ಬಾವ, ಪುಷ್ಪರಾಜ ಜೈನ್, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಕುಲಾಲ್, ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸುಂದರ ಪೂಜಾರಿ ಎನ್., ಸಂತೋಷ್ ಶೆಟ್ಟಿ ಕೊನೆರೊಟ್ಟು, ಆಂಡ್ರು ರೇಗೋ, ನೋಣಯ ಪೂಜಾರಿ, ಅರುಣ್ ಬಾಕ್ಯಾರುಕೋಡಿ, ಕರಿಯ ಪೂಜಾರಿ, ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ಮತ್ತಿತರ ಗಣ್ಯರು ಇದ್ದರು. ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಶಾಜಲ್ ಕಾರ್ಯಕ್ರಮ ನಿರೂಪಿಸಿದರು.