ಮಕ್ಕಳು ಆರೋಗ್ಯವಾಗಿದ್ದ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ,ಅದರ ಭಾಗವಾಗಿ ಈ ಗ್ರಾಮದ ಶಾಲೆಯ ಎಲ್ಲಾ ಮಕ್ಕಳಿಗಾಗಿ ನಡೆಯುತ್ತಿರುವ ಈ ನೇತ್ರ ತಪಾಸಣಾ ಶಿಬಿರ ಅತ್ಯಂತ ಮಹತ್ವಪೂರ್ಣವಾದುದು ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ನೇತ್ರಜ್ಯೋತಿ ರೆಟಿನಾ ಸೆಂಟರ್ ಮಂಗಳೂರು ವತಿಯಿಂದ ನಡೆದ ನೇತ್ರ ತಪಾಸಣಾ ಕಾರ್ಯಕ್ರಮ ಹಾಗು ರಾಷ್ಟ್ರೀಯ ಆವಿಷ್ಕಾರ್ ಯೋಜನೆಯಡಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವೈದ್ಯರಾದ ಡಾ. ಸೋಹನ್, ಡಾ.ಜಯಕೀರ್ತಿ, ಜಿಲ್ಲಾ ವಿಷಯ ಪರಿವೀಕ್ಷಣಾಧಿಕಾರಿ ದೇವದಾಸ್, ಮುಖ್ಯಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ , ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗುಲಾಬಿ, ಸ್ಥಳೀಯ ಗಣ್ಯರಾದ ಸೀತಾರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕಣ್ಣಿನ ತಪಾಸಣೆಯನ್ನು ನಡೆಸಿದ ವೈದ್ಯ ಡಾ.ಶ್ರೀಪತಿ ಕಾಮತ್ ಅವರನ್ನು ಈ ಶಿಬಿರ ಆಯೋಜನೆ ಮಾಡಿಸಿ ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕಾರಣಕರ್ತರಾದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಗೌರವಿಸಿದರು. ಶಿಬಿರದ ಸಂಯೋಜಕರಾದ ಭಾರತಿ ಹರೀಶ್ ಸ್ವಾಗತಿಸಿ, ಸರಸ್ವತಿ ಮಯ್ಯ ವಂದಿಸಿದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಸ್ತು ಪ್ರದರ್ಶನದ ಅಂಗವಾಗಿ ವಿವಿಧ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳೇ ನಿರ್ಮಿಸಿದರು.