ಫರಂಗಿಪೇಟೆ

ನೆತ್ತರಕೆರೆಯಲ್ಲಿ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಂಪನ್ನ

ಬಂಟ್ವಾಳ: ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಕಳೆದ 48ದಿನಗಳಿಂದ ಪ್ರತಿ ಮನೆ ಮನಗಳಲ್ಲಿ ಸಾಮೂಹಿಕ ರಾಮ ಮಂತ್ರ ಪಠನದೊಂದಿಗೆ ಆರಂಭಗೊಂಡ  ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಾರೋಪ ನೆತ್ತರಕೆರೆಯಲ್ಲಿ ಭಾನುವಾರ ನಡೆಯಿತು.

ಜಾಹೀರಾತು

ವೇದಮೂರ್ತಿ ಕಶೆಕೊಡಿ ಸೂರ್ಯ ನಾರಾಯಣ ಭಟ್ ನೇತೃತ್ವದಲ್ಲಿ ಯಜ್ಞ ಆರಂಭಗೊಂಡು ಆಗಮಿಸಿದ ಎಲ್ಲಾ ರಾಮ ಭಕ್ತರು 10 ಕುಂಡಗಳಲ್ಲಿ ಕುಟುಂಬ ಸಮೇತರಾಗಿ ಭಕ್ತಿ ಭಾವದಿಂದ ಹವಿಸ್ಸು ಅರ್ಪಿಸುವ ಮೂಲಕ ಪೂರ್ಣಾಹುತಿಗೊಂಡು ಮಂಗಳಾರತಿಯೊಂದಿಗೆ ಯಾಗ ಸಂಪನ್ನಗೊಂಡಿತು.

 ಬೆಳಿಗ್ಗೆ 6ಗಂಟೆಗೆ ಯಾಗ ಸ್ಥಳದಲ್ಲಿ ಗಣಪತಿ ಹೋಮ ನಡೆದು ಬಳಿಕ ಧ್ವಜಾರೋಹಣ ಹಾಗೂ ಗೋ ಪೂಜೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿದರು.

ಅಖಿಲ ಭಾರತ ಗ್ರಾಮ ವಿಕಾಸ ಟೋಳಿ ಸದಸ್ಯರಾದ ರಮೇಶ್ ಹೊಸು ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಹೋಮ, ಹವನ,ಪೂಜೆಯನ್ನು ನಮ್ಮಸಮಾಜದಲ್ಲಿ ವ್ಯಕ್ತಿಗತ ಸಾಧನೆಗಾಗಿ ಮಾಡುವ ಸಂಪ್ರದಾಯವಿದೆ, ಆದರೆ  ಇಲ್ಲಿ ರಾಮ ತಾರಕ ಯಜ್ಞದ ಮೂಲಕ ಸಮಸ್ತ ಸಮಾಜದ ಹಿತಕ್ಕಾಗಿ ಆಯೋಜಿಸರುವುದು ವಿಶೇಷ ಎಂದರು.

ಅಧ್ಯಕ್ಷತೆ ವಹಿಸಿದ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ ಆರ್ ಕೊಡ್ಮಾಣ್ ಮಾತನಾಡಿ ಪವಿತ್ರ ಜಾಗ ನೆತ್ತರಕೆರೆಯಲ್ಲಿ  ಯಾವುದೇ ಭೇದ ಬಾವವಿಲ್ಲದೆ ಎಲ್ಲರನ್ನು ಒಟ್ಟುಗುಡಿಸಿ ಸಾಮೂಹಿಕ ರಾಮ ನಾಮ ಜಪ ಯೋಜಿಸಿದ ಸತ್ಯ ದರ್ಶನ ಮಾಡಿದ ಎಲ್ಲರಿಗೂ ಶ್ರೀ ರಾಮನ ಆಶೀರ್ವಾದವ ಅನುಗ್ರಹವಿರಲಿ ಎಂದು ಹೇಳಿದರು.

ಬಂಟ್ವಾಳ ರಾಷ್ಟ್ರೀಯ ಸ್ವಯಂ ಸೇವಕ ಸಂಘಚಾಲಕ ಡಾ ಬಾಲಕೃಷ್ಣ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಕಾರ್ಯದರ್ಶಿ ಬಿನುತ್ ಕುಮಾರ್, ಕೋಶಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು ಶ್ರೀ ರಾಮ ತಾರಕ ಜಪ ಯಜ್ಞದ ಸಂಯೋಜಕರು ದಾಮೋದರ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ ಧನ್ಯವಾದವಿತ್ತು, ಮನಿಷಾ ಹಾಗೂ ಲತಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.