ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಚೆಂಡ್ತಿಮಾರ್ ಪರಿಸರದಲ್ಲಿರುವ ತೆರದ ಸರಕಾರಿ ಬಾವಿಗೆ ಸುರಕ್ಷತಾ ದೃಷ್ಟಿಯಿಂದ ಕಬ್ಬಿಣದ ಮುಚ್ಚಳ ಅಳವಡಿಸಿ ಎಂದು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಅವರಿಗೆ ಮನವಿ ನೀಡಿದ್ದಾರೆ.
ಚೆಂಡ್ತಿಮಾರ್ ಎಂಬಲ್ಲಿ ಸುಮಾರು ಅಳವಾದ ಬಾವಿಯಿದ್ದು, ಸುರಕ್ಷತಾ ದೃಷ್ಟಿಯಿಂದ ಯಾವುದೇ ಕ್ರಮವಹಿಸದ ಹಿನ್ನೆಲೆಯಲ್ಲಿ ಕಬ್ಬಿಣದ ಸೇಫ್ ಗಾರ್ಡ್ ವ್ಯವಸ್ಥೆ ಮಾಡಬೇಕು. ಈಭಾಗದಲ್ಲಿ ಅನೇಕ ಮನೆಗಳಿದ್ದು, ಸಣ್ಣ ಮಕ್ಕಳ ಸಹಿತ ಅನೇಕ ಪ್ರಾಣಿಗಳು ಕೂಡ ಓಡಾಟ ನಡೆಸುತ್ತಿರುವುದರಿಂದ ಅಪಾಯವಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಜನರ ಜೀವದ ಬೆಲೆಯರಿತು ಬಾವಿಗೆ ಕಬ್ಬಿಣದ ಮುಚ್ಚಳ ಹಾಕಿ ಕೊಡಿ ಎಂದು ಮನವಿ ಮಾಡಿದ್ದಾರೆ.