ನರಿಕೊಂಬು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಕೀರ್ತನಾ ಸಂಗೀತ ಶಾಲೆ ಮಾಣಿಮಜಲುವಿನ 25ರಂದು 12ನೇ ವಾರ್ಷಿಕೋತ್ಸವ ನಡೆಯಲಿದೆ.
ಬೆಳಗ್ಗೆ 8.30ಕ್ಕೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಉದ್ಘಾಟಿಸುವರು. ಬಳಿಕ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ಭಕ್ತಿಭಾವ ಲಹರಿ ನಡೆಯಲಿದೆ. ಮೃದಂಗದಲ್ಲಿ ಬಾಲಚಂದ್ರ ಭಾಗವತ್, ಶಾಮ ಭಟ್ ಸುಳ್ಯ, ಪಿಟೀಲಿನಲ್ಲಿ ಶ್ರೀಧರ ಆಚಾರ್ ಪಾಡಿಗಾರು, ಅನುಶ್ರೀ ಮಳಿ, ಕೀಬೋರ್ಡ್ ನಲ್ಲಿ ಡಾ. ದಿನೇಶ್ ಸುಳ್ಯ, ತಬಲಾದಲ್ಲಿ ಸೀತಾರಾಮ ರಾವ್ ಬಿ.ಸಿ.ರೋಡ್, ರಿದಂಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಮಣಿಯ ಸಹಕರಿಸುವರು. ಸಂಜೆ 4.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, ಸರ್ವೇಶ್ ದೇವಸ್ಥಳ ಅವರ ಹಾಡುಗಾರಿಕೆ, ಮಂಜುನಾಥ ಪದ್ಯಾಣ ಅವರ ಪಿಟೀಲು, ಕೃಷ್ಣ ಪವನ್ ಕುಮಾರ್ ಅವರ ಮೃದಂಗ ವಾದನ ಇರಲಿದೆ ಎಂದು ಗುರುಗಳಾದ ವಿದ್ವಾನ್ ಕೃಷ್ಣಾಚಾರ್ಯ ಮತ್ತು ವಿದುಷಿ ರಜತಾ ಕೃಷ್ಣಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.