ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯ ತಾಂತ್ರಿಕ ಸಂಸ್ಥೆ ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರೌಡಶಾಲೆಯಲ್ಲಿ ಕೇಂದ್ರ ಸರಕಾರದ ಯೋಜನೆಯಾದ ವಿಕಸಿತ ಭಾರತ-2047 ಬಿಲ್ಡಥಾನ್ ಕಾರ್ಯಕ್ರಮದಡಿ ಒಂದು ದಿನದ ಕಾರ್ಯಾಗಾರ ನಡೆಸಿತು. ಕೇಂದ್ರ ಶಿಕ್ಷಣ ಇಲಾಖೆ ಹೈಸ್ಕೂಲನ್ನು ವಿಕಸಿತ ಭಾರತ ಯೋಜನೆಯಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಜೋಡಿಸಿದೆ
ಶಾಲಾ ಮುಖ್ಯಸ್ಥರಾದ ಸೌಜನ್ಯ ರಾವ್ ವಿದ್ಯಾರ್ಥಿಗಳಿಗೆ ವಿಕಸಿತ ಭಾರತ ಯೋಜನೆಯ ಮಹತ್ವ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ಸಹಕಾರವನ್ನು ವಿವರಿಸಿದರು.
ವಿಶ್ವವಿದ್ಯಾಲಯದ ಇನ್ಕ್ಯುಬೇಷನ್ ಕೇಂದ್ರದ ನಿರ್ದೇಶಕ ಡಾ. ನವೀನ್ ಬಪ್ಪಳಿಗೆ, ಬಿಲ್ಡಥಾನ್ ಕಾರ್ಯಕ್ರಮದ ವಿವರ ಮತ್ತು ವಿದ್ಯಾರ್ಥಿಗಳಿಗೆ ಇದರ ಅಗತ್ಯದ ಬಗ್ಗೆ ಮಾಹಿತಿ ನೀಡಿದರು.
ಸೈಬರ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಪ್ರೊ.ಗೌರವ ಪ್ರಸಾದ್ ಯುವ ಜನತೆಗೆ ಸೈಬರ್ ಸದ್ಬಳಕೆಯ ಅಗತ್ಯ, ಕೃತಕ ಬುದ್ದಿಮತ್ತೆ ವಿಭಾಗದ ಡಾ. ಪ್ರವೀಣ್ ಬ್ಲೆಸಿಂಗ್ಟನ್, ಆಧುನಿಕ ಕೃತಕ ಬುದ್ದಿಮತ್ತೆ ಟೂಲ್ಸ್ ಬಗ್ಗೆ ವಿಚಾರ ಹಂಚಿಕೊಂಡು ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ತರಬಹುದಾದ ಬದಲಾವಣೆಗಳನ್ನು ವಿಶ್ಲೇಷಿಸಿದರು. ವಿದ್ಯಾರ್ಥಿಗಳಾದ ತೇಜಸ್ವಿನಿ ಮಲ್ಗೆ, ನಿವೇದಿತಾ ಮತ್ತು ವೈಭವಿ ಪ್ರಾಯೋಗಿಕ ತರಬೇತಿ ನೀಡಿದರು. ಹೈಸ್ಕೂಲ್ ವಿದ್ಯಾರ್ಥಿಗಳಾದ ಪ್ರಜ್ವಲ್ ಮತ್ತು ವಂಶಿಕ್ ಅವರ ವಿನೂತನ ಪ್ರಾಜೆಕ್ಟ್ ಗಳಿಗೆ ಮಾರ್ಗದರ್ಶನ ನೀಡಿ, ಇವುಗಳ ಪೇಟೆಂಟ್ ಗೆ ಶ್ರೀನಿವಾಸ ವಿಶ್ವವಿದ್ಯಾಲಯವು ಸಹಕರಿಸುವುದಾಗಿ ಭರವಸೆ ನೀಡಲಾಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಜನಾರ್ದನ ವಂದನೆ ಸಲ್ಲಿಸಿದರು