ಕೊಕ್ಕಪುಣಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಸಮಿತಿ ಕೊಕ್ಕಪುಣಿ ಅಂಗನವಾಡಿ ಕೇಂದ್ರ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಉಷಾ ಕುಮಾರಿ ವಹಿಸಿದ್ದರು.
ಬೋಳಂತೂರು ಪಂಚಾಯತ್ ಅಧ್ಯಕ್ಷೆ ಶಾಲಿನಿ ಉದ್ಘಾಟಿಸಿದರು.ವಿಟ್ಲ ಸಮುದಾಯ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶಮಾನ್ ಜೆ ಶೆಟ್ಟಿ ಕ್ಯಾನ್ಸರ್ ಹಾಗೂ ಸ್ಟ್ರೋಕ್ ನಿಂದಾಗುವ ಅರೋಗ್ಯ ಸಮಸ್ಯೆ ಹಾಗೂ ಪೌಷ್ಟಿಕ ಆಹಾರದಿಂದ ಆಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಎಚ್. ಐ. ಮಾತನಾಡಿ, ಕೊಕ್ಕಪುಣಿ ಅಂಗನವಾಡಿ ಕೇಂದ್ರದ ಜಾಗದ ದಾಖಲೆಗಳನ್ನು ಸರಿಪಡಿಸಿ,ಸುಸಜ್ಜಿತವಾದ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಯತ್ನಿಸಲಾಗುವುದು ಎಂದರು.
ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿ ರೂಪಕಲಾ ಶುಭ ಹಾರೈಸಿದರು.
ಪಂಚಾಯತ್ ಉಪಾಧ್ಯಕ್ಷ ಯಾಕೂಬ್, ಸದಸ್ಯರಾದ ಸಂಧ್ಯಾ,ರುಕ್ಯಾ, ಬೋಳಂತೂರು ಗ್ರಾಮ ಸಿ ಎಚ್ ಓ ಸಂತೋಷ್, ಬಾಲವಿಕಾಸ ಸಮಿತಿ ಸದಸ್ಯರಾದ ಮಹಮ್ಮದ್ ಕುಂಞ, ಹಿರಿಯರಾದ ಇಸ್ಮೈಲ್, ಮೊದಲಾದವರು ಉಪಸ್ಥಿತರಿದ್ದರು. ಲವೀನ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು. ಜಯಂತಿ ಸಹಕರಿಸಿದರು