ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಮತ್ತು ಹಿದಾಯ ಫೌಂಡೇಶನ್ ಮಂಗಳೂರು ಜಂಟಿ ಆಶ್ರಯದಲ್ಲಿ ನೀಟ್, ಸಿಇಟಿ, ಜೆಇಇ ಪರೀಕ್ಷಾ ಮಾಹಿತಿ ಕಾರ್ಯಾಗಾರ ಮೆಲ್ಕಾರಿನ ಬಿರ್ವ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟಿಸಿದ ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ವಿದ್ಯಾರ್ಥಿಗಳು ಸಕಾಲದಲ್ಲಿ ಸರಿಯಾದ ಮಾಹಿತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿತಾಯ ಮಾಡಬಹುದು ಎಂದು ಹೇಳಿದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ಬಿ.ಎಂ ಅಬ್ಬಾಸ್ ಅಲಿ, ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸುವ ಕಾರಣ ಉದ್ಯೋಗ ವಲಯ ಎದುರಿಸಲಿರುವ ಸವಾಲುಗಳಿಗೆ ಯುವ ಸಮುದಾಯ ಮಾನಸಿಕವಾಗಿ ತಯಾರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಸೆನೆಟ್ ಸದಸ್ಯ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಮುಸ್ತಾಫಾ ಬಸ್ತಿಕೋಡಿ ಮತ್ತು ನೀಟ್ ಪರೀಕ್ಷಾ ಸಲಹೆಗಾರ ಇಫ್ತಿಕಾರ್ ಅಹಮದ್ ಮಂಗಳೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು, ಸ್ಪರ್ಧಾತ್ಮಕ ಪರಿಕ್ಷೆಗಳ ಸ್ವರೂಪ, ಅವಶ್ಯಕ ದಾಖಲೆಗಳು, ಸರಕಾರಿ ಪ್ರವೇಶಾತಿಗಳ ಪ್ರಯೋಜನಗಳು ಇತ್ಯಾದಿ ಉಪಯುಕ್ತ ಮಾಹಿತಿ ನೀಡಿದರು.
ಇದೇ ವೇಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಡಾ. ಮುಸ್ತಾಫಾ ಬಸ್ತಿಕೋಡಿ ಅವರನ್ನು ಆಯೋಜಕ ಉಭಯ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಆಜೀವ ಸದಸ್ಯ ಮೊಹಮ್ಮದ್ ರಫೀಕ್ ಹಾಜಿ ಸುರಿಬೈಲು ಅತಿಥಿಗಳಾಗಿ ಭಾಗವಹಿಸಿದ್ದರು.
ಆಜೀವ ಸದಸ್ಯರಾದ ಮೊಹಮ್ಮದ್ ಸಾಗರ್ ಮಿತ್ತಬೈಲ್, ಬಿ.ಎ.ಮೊಹಮ್ಮದ್ ಬಂಟ್ವಾಳ, ಪಿ.ಮೊಹಮ್ಮದ್ ಪಾಣೆಮಂಗಳೂರು, ಕರೀಂ ಕೋಟೆಕಣಿ, ಇಬ್ರಾಹಿಂ ಮೊಯ್ದಿನ್ ನಂದಾವರ, ಪಿ.ಎ.ರಹೀಂ ಬಿ.ಸಿ.ರೋಡ್, ಕರೀಂ ರೆಂಗೇಲು,
ಇಬ್ರಾಹೀಂ ಖಲೀಲ್ ಕೆ.ಸಿ.ರೋಡ್, ಆಶಿಕ್ ಕುಕ್ಕಾಜೆ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ಸ್ವಾಗತಿಸಿದರು. ಕೋಶಾಧಿಕಾರಿ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.