ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಗೋಳ್ತಮಜಲು, ಬಾಲ್ತಿಲ, ಅಮ್ಟೂರು, ವೀರಕಂಭ ಬೋಳಂತೂರು, ಬೊಂಡಾಲ, ಗ್ರಾಮಗಳನ್ನು ಒಳಗೊಂಡ ಕಲ್ಲಡ್ಕ ಬಿಲ್ಲವ ಸಮಾಜ ಸೇವ ಸಂಘ ಕಲ್ಲಡ್ಕ ವಲಯ ನೂತನ ಪದಾಧಿಕಾರಿಗಳ ಪದಗ್ರಹಣ, ಹಾಗೂ ಬೈದ್ಯಶ್ರೀ ಕ್ರೀಡೋತ್ಸವ ನಡೆಯಿತು.
ಗೋಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಕ್ರೀಡಾಕೂಟದ ಧ್ವಜಾರೋಹಣ ಮಾಡಿದರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಕ್ರೀಡಾಂಕಣವನ್ನು ಉದ್ಘಾಟಿಸಿದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ್ ಸಾಲಿಯನ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕಲ್ಲಡ್ಕ ಬಿಲ್ಲವ ಸಮಾಜ ಸೇವ ಸಂಘದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಸಂಘಟನೆಯಲ್ಲಿ ಯಾವುದೇ ರಾಜಕೀಯ ಬಾರದ ಹಾಗೆ ಜಾಗೃತೆ ವಹಿಸಿ ಸಮಾಜ ಬಾಂಧವರ ಕಷ್ಟಗಳಿಗೆ ಧ್ವನಿಯಾಗಿ ಮಾದರಿ ಸಂಘಟನೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿದ್ದ ಗಣ್ಯರ ಮೂಲಕ ಬಿಲ್ಲವ ಸಮಾಜ ಸೇವಾ ಸಂಘದ ಕಲ್ಲಡ್ಕ ವಲಯದ ಗ್ರಾಮ ಸಮಿತಿ ಎಲ್ಲ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಈ ಸಂದರ್ಭ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷ ಪುಷ್ಪ ಸತೀಶ್ ದೇವಸ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗೋಕರ್ಣನಾಥ ಕ್ಷೇತ್ರ ಕುದ್ರೊಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಪುತ್ತೂರು ಅಕ್ಷಯ ಕಾಲೇಜಿನ ಜಯಂತ್ ನಡುಬೈಲು, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸಂಜೀವ ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ, ಬಾಲ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಚೆಂಡೆ, ಬಿಜೆಪಿ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಲೋಕೇಶ್ ವಿ ಕೃಷ್ಣಕೋಡಿ, ಬಂಟ್ವಾಳ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲ್, ನ್ಯಾಯವಾದಿ ಶೈಲಜ ರಾಜೇಶ್, ಸುರೇಂದ್ರ ಅಮೀನ್ ಬೋಳಂತೂರು, ಯಶವಂತ ದೇರಾಜೆ, ಎಸ್ ಎಸ್ ಕಲ್ಲಕಟ್ಟ, ಚಂದ್ರಶೇಖರ್ ಪೂಜಾರಿ ಬಾಯಿಲ,ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೊಳಿಮಾರ್, ಮಹಾಬಲ ಪೂಜಾರಿ ಮುಳಿಕೊಡಂಗೆ, ಮಿಥುನ್ ಪೂಜಾರಿ ಹೊಸಮನೆ, ಕಲ್ಲಡ್ಕರೈತರ ಸೇವಾ ಸಹಕಾರಿ ಸಂಘ ವ್ಯವಸ್ಥಾಪಕ ಚಿದಾನಂದ ಪೂಜಾರಿ, ರಬ್ಬರ್ ಮತ್ತು ಜೇನು ಸಹಕಾರಿ ಸಂಘ ದ ಅಧ್ಯಕ್ಷ ಮೋಹನ್ ಪಿ ಎಸ್, ಶರತ್ ಕುಮಾರ್ ಅಮ್ಟೂರು, ನೂತನ ಅಧ್ಯಕ್ಷ ಚಂದ್ರಶೇಖರ್ ಶಾಲಿಯಾನ್, ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಕೋಶಾಧಿಕಾರಿ ಕಿಶೋರ್ ಕುಮಾರ್ ಕಟ್ಟೆಮಾರು, ಬಿಲ್ಲವ ಸಂಘದ ಮಹಿಳಾ ಸಮಿತಿಯ ನೂತನ ಅಧ್ಯಕ್ಷ ಲಾವಣ್ಯ ಸುಂದರ ಪೂಜಾರಿ, ಕಾರ್ಯದರ್ಶಿ ವಿಜಯ ಶರತ್ ಅಮ್ಟೂರು, ಸಂಘದ ಲೆಕ್ಕ ಪರಿಶೋಧಕ ಯತಿನ್ ಕುಮಾರ್ ಪಂಚವಟಿ, ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ಯೋಗೀಶ್ ಕಲ್ಲಡ್ಕ, ಜಯಂತ್ ಕುಂಟಲ್ಪಾಡಿ, ಪ್ರಶಾಂತ್ ತೆಕ್ಕಿಪಾಪು, ಕೂಸಪ್ಪ ಮಾಸ್ಟರ್, ಸತೀಶ್ ಪೂಜಾರಿ,, ಗ್ರಾಮ ಮಹಿಳಾ ಸಮಿತಿಯ ಅಧ್ಯಕ್ಷರುಗಳಾದ ಉಷಾ ಪುರುಷೋತ್ತಮ ಶಾಲಿನಿ ಜಗದೀಶ್, ಸುಚೇತ ಮಹಾಬಲ ಪೂಜಾರಿ, ಪ್ರೇಮ ಶೇಖರ ಪೂಜಾರಿ, ಆಶಾಲತಾ ಚೆನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.
ಬಿಲ್ಲವ ಸಮಾಜ ಸೇವ ಸಂಘದ ಕಾರ್ಯದರ್ಶಿ ರಮೇಶ್ ಹೊಸಕಟ್ಟ ಸ್ವಾಗತಿಸಿ, ರವೀಂದ್ರ ಪಾದೆ ಪ್ರಾಸ್ತಾವಿಕ ವರದಿ ಮಂಡಿಸಿದರು. ವಸಂತ ಬಟ್ಟಹಿತ್ತಿಲು ವಂದಿಸಿದರು. ರೇಣುಕಾ ಕಣಿಯೂರು ಹಾಗೂ ದಿನೇಶ್ ಕೃಷ್ಣಕೊಡಿ ಕಾರ್ಯಕ್ರಮ ನಿರೂಪಿಸಿದರು.