ಒಂದು ಸಂಸ್ಥೆಯ ಏಳಿಗೆಯು ಪೋಷಕರ ಮತ್ತು ಶಾಲಾಭಿವೃದ್ಧಿಯ ಕೆಲಸವನ್ನು ಅವಲಂಬಿಸಿದೆ. ಕಾರ್ಯಕ್ರಮವು ಯಶಸ್ಸನ್ನು ಸಾಧಿಸಬೇಕಾದರೆ ಸೇವಾ ಮನೋಭಾವ, ಸಮಾನ ಮನೋಭಿಲಾಷೆಯನ್ನು ಹೊಂದಿರುವವರು ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಸಂಘಟನೆಗಳ ಸಹಕಾರವಿದ್ದರೆ ಸರಕಾರಿ ಶಾಲೆಯ ಚಿತ್ರಣವೇ ಬದಲಾಗುತ್ತದೆ ಎಂದು ಬಂಟ್ವಾಳ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಹೇಳಿದ್ದಾರೆ.
ಮಜಿ ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಹೆಜ್ಜೆ ಗೆಜ್ಜೆ- ನಿನಾದ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರ್ ತನಗೆ 10 ವರ್ಷಗಳ ಕಾಲ ವೀರಕಂಬ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಲು ವೀರಕಂಭದ ಜನತೆ ಅವಕಾಶ ಮಾಡಿಕೊಟ್ಟಿದ್ದು ಮಜಿ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಕಾರಣ ಶಾಲೆಗೆ ರಚನೆಯಾದ ಶಾಲಾ ಮುಖ ದ್ವಾರದ ಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭ ಶಾಲೆಗೆ 10 ವರ್ಷಗಳಿಂದ ನಿರಂತರವಾಗಿ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಮೇಲ್ಕಾರಿನ ಚಂದ್ರಿಕಾ ವೆಜಿಟೇಬಲ್ ಮಾಲಕ ಮಹಮ್ಮದ್ ಶರೀಫ್, ಸತತ ಏಳು ವರ್ಷಗಳ ಕಾಲ ಶಾಲೆಯನ್ನು ದತ್ತು ಪಡೆದು ಶಾಲಾ ಅಭಿವೃದ್ಧಿಗೆ ಕಾರಣಕರ್ತರಾದ ಸುರತ್ಕಲ್ ಮಾತಾ ಡೆವಲಪರ್ಸ್ ಮಾಲೀಕ ಹಾಗೂ ಇಂಜಿನಿಯರ್ ಸಂತೋಷ ಶೆಟ್ಟಿ ಅರೆಬೆಟ್ಟು, ತಾನು ಕಲಿತ ವಿಷಯದಲ್ಲಿ ಕಳೆದ 25 ವರ್ಷಗಳಿಂದ ಶಾಲಾ ಭೌತಿಕ ಅಭಿವೃದ್ಧಿಗೆ ವಿಶೇಷವಾಗಿ ಪ್ರಯತ್ನಿಸುತ್ತಿರುವ ಚಿನ್ನಾ ಮೈರಾ, ನಿವೃತ್ತಿಗೊಂಡ ಶಾಲಾ ಅಕ್ಷರ ದಾಸೋಹದ ಸಹಾಯಕಿ ಗಿರಿಜಾ ಅವರನ್ನುರವರನ್ನು ಶಾಲಾ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.
ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ಮೀನಾಕ್ಷಿ ಸುನಿಲ್, ಮಂತ್ರದೇವತಾ ಸಾನಿಧ್ಯ ಕಟ್ಟೆಮಾರಿನ ಕಿಶೋರ್ ಕುಮಾರ್ ಕಟ್ಟೆ ಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್, ನಿವೃತ್ತ ಮುಖ್ಯ ಶಿಕ್ಷಕ ಕೇಶವಯ್ಯ ಎಸ್, ಪಿ ಎಲ್ ಡಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಶೇಖರ ಎಂ, ಶ್ರೀ ಗಿಲ್ಕಿಂಜತಾಯಿ ಉತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಪಣಂಬೂರು ಆರಕ್ಷಕ ಠಾಣೆಯ ಎ ಎಸ್ ಐ ರಾಜು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಬೆನ್ನಿಡಿಕ್ಟ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ಶಿಕ್ಷಕರಾದ ಮುಷಿ೯ದಾ ಬಾನು ಶಾಲಾ ವರದಿವಾಚಿಸಿ ಶಿಕ್ಷಕಿಯರಾದ ಸಂಪ್ರಿಯ, ಅನುಷಾ, ಮಮತಾ, ಹೇಮಾ ಟಿ, ಸನ್ಮಾನ ಪತ್ರಗಳನ್ನು ವಾಚಿಸಿದರು . ಜಯಲಕ್ಷ್ಮಿ ಬಹುಮಾನಿತರ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಹಾಗೂ ಶಿಕ್ಷಕ ತೌಸೀಫ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿರಾದ ರೇಷ್ಮಾ, ಹರಿಣಾಕ್ಷಿ, ಭವ್ಯ, ಸುಷ್ಮಾ , ಹಾಗೂ ಪಲ್ಲವಿ ಸಹಕರಿಸಿದರು.
ಶಾಲೆಯನ್ನು ಮಕ್ಕಳೇ ತಯಾರಿಸಿದ ಗೆರೆಟೆಯ ವಿವಿಧ ಅಲಂಕಾರಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ನಂತರ ಮಂಗಲಪದವು, ಕೆಲಿಂಜ, ಎರ್ಮೆಮಜಲು, ಮಜಿ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು