ಸ್ವಾವಲಂಬಿ ಬದುಕು ಮಾನವ ಗೌರವದ ಮೂಲವೆಂದು ನಾರಾಯಣಗುರು ಬೋಧಿಸಿದರು. ಸ್ವತಂತ್ರ ಚಿಂತನೆ ಮತ್ತು ಕಾಯಕದ ಗೌರವಕ್ಕೆ ಗುರುಗಳು ದಾರಿ ತೋರಿದರು ಎಂದು ಯುವ ವಾಗ್ಮಿ ರಾಜೇಶ್ ಬಲ್ಯ ತಿಳಿಸಿದರು
ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ವೀರಕಂಭ ಬಾಯಿಲ ಜಯಂತ ಪೂಜಾರಿ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 63ರಲ್ಲಿ ಗುರುಸಂದೇಶ ನೀಡಿದರು
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಕಿರಣ್ ರಾಜ್ ಪೂoಜರೆಕೋಡಿ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಆನಂದ ಪೂಜಾರಿ ಅಜ್ಜಿಬೆಟ್ಟು, ಪ್ರಶಾಂತ್ ಅಮೀನ್ ಏರಮಲೆ, ಯತೀಶ್ ಬೊಳ್ಳಾಯಿ,ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಅರುಣ್ ಕುಮಾರ್ ಉಪಸ್ಥಿತರಿದ್ದರು. ಸಂಗೀತದಲ್ಲಿ
ಸಾತ್ವಿಕ್ ದೇರಾಜೆ, ಕಾರ್ತಿಕ್ ದೇರಾಜೆ. ವಿನಯ ಆಚಾರ್ಯ ಸಹಕರಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು