ಬಂಟ್ವಾಳ: ರೋಟರಿ ಕ್ಲಬ್ ನ ವಲಯ 4ರ ಮಾಜಿ ಸಹಾಯಕ ಗವರ್ನರ್, ಜಿಲ್ಲಾ ಕಾರ್ಯದರ್ಶಿ ಹಾಗೂ ಬಂಟ್ವಾಳ ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾಗಿದ್ದ ವಿಜಯಾ ಬ್ಯಾಂಕ್ ನ ನಿವೃತ್ತ ಸಿಬ್ಬಂದಿ ಎಂ.ರಾಮಣ್ಣ ರೈ (72) ಅಲ್ಪಕಾಲದ ಅಸೌಖ್ಯದ ಬಳಿಕ ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರನ್ನು ಅವರು ಹೊಂದಿದ್ದರು.
ಮೂಲತಃ ಅಂಬಾಬೀಡು ಮನೆಯವರಾಗಿದ್ದು, ಪ್ರಸ್ತುತ ಮಾವಂತೂರುಗುತ್ತಿನಲ್ಲಿ ನೆಲೆಸಿದ್ದ ಅವರು, ಬಂಟ್ವಾಳ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾಗಿ,ವಲಯ ನಾಲ್ಕರ ಸಹಾಯಕ ಗವರ್ನರ್, 2023ರಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ರೋಟರಿ ಕ್ಲಬ್ ನಲ್ಲಿ ಸುಮಾರು ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ವಿಜಯಾ ಬ್ಯಾಂಕ್ ನಲ್ಲಿ ಸುದೀರ್ಘ ಅವಧಿಯಲ್ಲಿ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಬಂಟರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಬಂಟ್ವಾಳ ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು. ಸಾಮಾಜಿಕವಾಗಿ ಹಲವು ಸಂಘ, ಸಂಸ್ಥೆಗಳಲ್ಲಿ ರಾಮಣ್ಣ ರೈ ಅವರು ಸಕ್ರಿಯರಾಗಿದ್ದರು.