ಬಿ.ಸಿ.ರೋಡಿನ ಚಿಕ್ಕಯ್ಯಮಠ ನಿವಾಸಿ ನಾಗೇಶ್ ಡಿ. ಅವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಗ್ರಂಥಾಲಯ ವಿಭಾಗದಲ್ಲಿ ಸುಮಾರು 38 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಗ್ರಂಥಾಲಯ ವಿಭಾಗದಲ್ಲಿ ನಡೆಯಿತು.
ಈ ಸಂದರ್ಭ ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ವಿಭಾಗದ ಅಸೋಸಿಯೇಟ್ ಡೀನ್ ಡಾ. ಪ್ರೇಮಲತಾ ಶೆಟ್ಟಿ ಹಾಗು ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಸುರೇಶ್ ಶೆಟ್ಟಿ ಹಾಜರಿದ್ದು, ಶುಭ ಹಾರೈಸಿದರು. ಮುಖ್ಯ ಗ್ರಂಥಪಾಲಕಿ ಡಾ. ಪೂಜಾ ಭಟ್, ಗ್ರಂಥಪಾಲಕ ರಘುವೀರ್, ಉಪಗ್ರಂಥಪಾಲಕಿ ಲಲಿತಾ ಕೆ.ವಿ ಹಾಗೂ ಗ್ರಂಥಾಲಯ ಸಿಬ್ಬಂದಿ, ಆಡಳಿತ ಕಚೇರಿ ಸಿಬ್ಬಂದಿ ಹಾಜರಿದ್ದರು.