ಅಟಲ್ ಬಿಹಾರಿ ವಾಜಪೇಯಿಯವರು ಒಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಯಂಸೇವಕ,ವಾಗ್ಮಿ,ಕವಿ, ಪತ್ರಕರ್ತ ಹಾಗೂ ಉತ್ತಮ ಸಂಸದೀಯ ಪಟು ಆಗಿದ್ದರು.ಸುಮಾರು ನಲ್ವತ್ತ ಎಂಟು ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದ ಅವರು ಅವರ ಸ್ವಚ್ಛ ರಾಜಕೀಯ ಜೀವನ, ದೂರದರ್ಶಿತ್ವದಿಂದ ಜನಾನುರಾಗಿಯಾಗಿದ್ದರು. ಈಗಿನ ಜನಪ್ರತಿನಿಧಿಗಳು ಅವರ ವ್ಯಕ್ತಿತ್ವದಿಂದ ಕಲಿಯಬೇಕಾದ್ದು ತುಂಬಾ ಇದೆ.ಯಾವುದೇ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲದ ಸ್ವಾರ್ಥ ರಹಿತ ರಾಜಕಾರಣ ಕಾರ್ಯಕರ್ತರಿಗೆ ಪ್ರೇರಣೆ ” ಎಂದು ಅಳಿಕೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಕಾನ ಈಶ್ವರ ಭಟ್ ಹೇಳಿದರು.
ಅವರು ಮಾಣಿಲ ಗ್ರಾಮದ ಸ್ವರ್ಣ ಸಭಾಭವನದಲ್ಲಿ ಜರುಗಿದ ಮಾಣಿಲ ಗ್ರಾಮ ಮಟ್ಟದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಕ್ಕಳ ಸಾಹಿತಿ ಸವಿತಾ ಎಸ್.ಭಟ್ ಮತ್ತು ಮಾಜಿ ಮಂಡಲ ಪ್ರಧಾನ ಮುರುವ ಮಹಾಬಲ ಭಟ್ ಮಾತನಾಡಿದರು.
ಗಣೇಶ ಕುಮಾರ್ ದೇಲಂತಮಜಲು ಸ್ವಾಗತಿಸಿದರು. ಎಸ್. ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು ಕೃಷ್ಣಾನಂದ ಮಾಣಿಮೂಲೆ ಕೃತಜ್ಞತೆ ಅರ್ಪಿಸಿದರು. ಯಶ್ವಿತಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.