ಶ್ರೀ ಸತ್ಯ ಸಾಯಿ ಜನ್ಮ ಶತಾಬ್ದಿ ಆಚರಣೆ ಪ್ರಯುಕ್ತ ಬಿ.ಸಿ.ರೊಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಶಾಲೆ ಬಂಟ್ವಾಳ ವತಿಯಿಂದ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕಿ ಮೂಕಾಂಬಿಕ ರಾವ್, ಬಂಟ್ವಾಳ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕರಾದ ಭಾರತಿ ಕುಂದರ್, ಮತ್ತು ವಿಶ್ವನಾಥ್ ಶೆಟ್ಟಿ ಮಕ್ಕಳಿಗೆ ಬಟ್ಟೆಯನ್ನು ನೀಡಿ ಹಿತ ನುಡಿಗಳನ್ನು ತಿಳಿಸಿದರು. ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ. ಮತ್ತು ಶಿಕ್ಷಕವೃಂದ ಈ ಸಂದರ್ಭ ಉಪಸ್ಥಿತರಿದ್ದರು.