ತಾಪಂ ಆಡಳಿತಾಧಿಕಾರಿ ಎಚ್. ಶಶಿಧರ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಪೂರಕ ಮಾಹಿತಿ ನೀಡಿದರು
ಬಂಟ್ವಾಳದಲ್ಲಿ ೨೦ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ ಎಂದು ಸಿಡಿಪಿಒ ಮಮ್ತಾಜ್ ಆರು ಅಂಗನವಾಡಿಗಳಿಗೆ ಕಟ್ಟಡವಿಲ್ಲ. ತಹಶೀಲ್ದಾರ್ ಅವರೇ ನಿವೇಶನ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಾನಿಗಳ ನೆರವನ್ನು ಕೇಳಿದ್ದೇವೆ ಎಂದು ಮಾಹಿತಿ ನೀಡಿದರು. ಶಾಲೆಗಳಲ್ಲಿ ಅಂಗನವಾಡಿಗೆ ಅವಕಾಶ ನೀಡಲು ಕಳೆದ ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ನಡೆಸಲು ಇಒ ಸಚಿನ್ ಕುಮಾರ್ ತಿಳಿಸಿದರು.
ಪಶುವೈದ್ಯಕೀಯ ಇಲಾಖಾ ತಾಲೂಕು ವೈದಾಧಿಕಾರಿ ಡಾ. ಉಮೇಶ್ ಕಿರಣ್ ಮಾಹಿತಿ ನೀಡಿ ಬೀದಿನಾಯಿಗಳ ಸಂರಕ್ಷಣೆ ಕುರಿತು ಮಾರ್ಗಸೂಚಿಗಳನ್ನು ಅನುಸರಿಸಬೇಕಾದ ವಿಧಾನ ಹಾಗೂ ಸರಕಾರದ ನಿರ್ದೇಶನಗಳ ಕುರಿತು ವಿವರಿಸಿದರು.
ತಾಪಂ ಅಧೀನದಲ್ಲಿ ಹದಿನಾಲ್ಕು ಬಾಡಿಗೆ ಕಟ್ಟಡ ಇದೆ. ಇದರಲ್ಲಿ ಎರಡು ಖಾಲಿ ಇದೆ. ಹನ್ಬೆರಡರಲ್ಲಿ ಬಾಡಿಗೆಯವರು ಇದ್ದಾರೆ. ಬಾಡಿಗೆ ಬಾಕಿ ಇದ್ದವರಿಗೆ ಎರಡು ಬಾರಿ ನೋಟಿಸ್ ಕೊಟ್ಟಿದ್ದು, ಎಂಟು ಅಂಗಡಿಯವರು ಬಾಡಿಗೆ ಪಾವತಿ ಮಾಡಿದ್ದಾರೆ. ನಾಲ್ಕು ಅಂಗಡಿಯವರು ಪಾವತಿ ಮಾಡಿಲ್ಲ ಎಂದು ಇಒ ಹೇಳಿದರು. ಮೂರನೇ ನೋಟಿಸ್ ಗೂ ಸ್ಪಂದಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆಲಸ ಸಂದರ್ಭ ದೂರುಗಳು ಬರುತ್ತಿರುವ ಬಗ್ಗೆ ಸಚಿನ್ ಕುಮಾರ್ ಪ್ರಶ್ನಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಲು ಸೂಚಿಸಿದರು. ಜನವರಿ ಮೊದಲ ವಾರದೊಳಗೆ ಎಲ್ಲ ಕೆಲಸಗಳಿಗೂ ಅನುಮೋದನೆ ಪಡೆದುಕೊಳ್ಳಬೇಕು. ಖರೀದಿಗಳನ್ನು ಸಾಮಾನ್ಯ ಸಭೆಯಲ್ಲಿ ಕಡ್ಡಾಯ ಅನುಮೋದನೆ ಆದ ಮೇಲೆ ಮಾಡಬೇಕು ಎಂದು ಇಒ ಸೂಚಿಸಿದರು.