ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯನ್ವಯ ವಾಟರ್ ಶೆಡ್ ಮಹೋತ್ಸವ ಕಾರ್ಯಕ್ರಮ ಮುಡಿಪುವಿನಲ್ಲಿ ಬಂಟ್ವಾಳ ತಾಲೂಕು ಕೃಷಿ ಇಲಾಖೆಯಿಂದ ನಡೆಯಿತು.
ಮುಡಿಪುವಿನ ಜನಶಿಕ್ಷಣ ಟ್ರಸ್ಟ್ ನಿಂದ ನವೋದಯ ಮಂಟಪದ ಸಭಾಂಗಣದಲ್ಲಿ ಕೃಷಿ ಇಲಾಕೆಯ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯ ಜಲಾನಯನ ಮಹೋತ್ಸವ ಹೆಸರಿನ ಈ ಕಾರ್ಯಕ್ರಮದಲ್ಲಿ ಕುರ್ನಾಡು ಗ್ರಾಪಂ ಅಧ್ಯಕ್ಷೆ ಪ್ರೇಮಾ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮವು ರೈತರ ಪಾಲಿನ ಆಶಾಕಿರಣ ಎಂದರು.
ಉಳ್ಳಾಲ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ದೇವದಾಸ ಭಂಡಾರಿ ಮಾತನಾಡಿ, ಕೃಷಿಕರು ಇಲಾಖಾ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ್ ಮಣ್ಣು ನೀರು ಸಂರಕ್ಷಣೆಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ .ಜೋ ಪ್ರದೀಪ್ ಡಿ ಸೋಜರವರು ತೋಟಗಾರಿಕಾ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವಿಟ್ಲ ಹೋಬಳಿ ಆತ್ಮ ಯೋಜನೆಯ ವಿರೂಪಾಕ್ಷಿ ಹಡಪದ ಯಾಂತ್ರೀಕರಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ತುಂತುರು ನೀರಾವರಿ ಘಟಕ, ಪವರ್ ಸ್ಪ್ರೇಯರ್, ಪವರ್ ವೀಡರ್ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಆಹಾರ ಭದ್ರತಾ ಯೋಜನೆಯಡಿ ಉಚಿತ ಉದ್ದು ಮಿನಿಕಿಟ್ ವಿತರಣೆಯನ್ನು ಜಲಾನಯನ ಸಹಾಯಕ ವಿನಿತ್ ನಿರ್ವಹಿಸಿದರು. ಜಲಾನಯನ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಜಲಾನಯನ ಸಹಾಯಕ ಪ್ರವೀಣ್ ನಿರ್ವಹಿಸಿದರು. ಮಣ್ಣು ಆರೋಗ್ಯ ಕಾರ್ಯಕ್ರಮದಡಿ ಮಣ್ಣು ಆರೋಗ್ಯ ಚೀಟಿ ವಿತರಣೆಯನ್ನು ಆತ್ಮ ಯೋಜನೆಯ ಬಿಟಿಯಂ ದೀಕ್ಷಾ ನಿರ್ವಹಿಸಿದರು. ಪಜೀರು, ಕುರ್ನಾಡು, ಬಾಳೆಪುಣಿ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಜಲಾನಯನ 2.0 ಯೋಜನೆಯಡಿ ಸೃಜಿಸಲಾದ ಕಿಂಡಿ ಅಣೆಕಟ್ಟು ಹಾಗೂ ಅರಣ್ಯ, ತೋಟಗಾರಿಕೆ ಕಾಮಗಾರಿಗಳನ್ನು ಆಸ್ತಿ ವಹಿ ಮುಖಾಂತರ ಹಸ್ತಾಂತರ ಕಾರ್ಯವನ್ನು ಜಲಾನಯನ ಸಹಾಯಕಿ ವೀಣಾ ಡಿ ಸೋಜ ನಿರ್ವಹಿಸಿದರು.
ಸಮುದಾಯ ಆಸ್ತಿಗಳ ನಿರ್ವಹಣೆಗೆ ಜಲಾನಯನ ಅಭಿವೃದ್ಧಿಯ ನಿಧಿಯನ್ನು ಬಳಸುವ ಕುರಿತ ಕ್ರಿಯಾ ಯೋಜನೆಯ ಅನುಮೋದನೆ ಪಡೆಯಲಾಯಿತು.
ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಫಜೀರು ಗ್ರಾಪಂ ಅಧ್ಯಕ್ಷ ಮಹಮ್ಮದ್ ರಪೀಕ್
ಮಂಜನಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ, ನರಿಂಗಾನ ಗ್ರಾಪಂ ಅಧ್ಯಕ್ಷ ಮಹಮ್ಮದ್ ನವಾಝ್, ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಉಗ್ಗಪ್ಪ ಮಾಣಾಯಿ,ಪ್ರಗತಿಪರ ಕೃಷಿಕ ಪ್ರಶಾಂತ್ ಕಾಜವ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಉಳ್ಳಾಲ ತಾಲೂಕು ಕೃಷಿಕ ಸಮಾಜ ಕಾರ್ಯದರ್ಶಿಜೋಸೆಫ್ ಡಿ ಕುಟಿನ್ಹಾ ಹಾಜರಿದ್ದರು. ಮೌನೇಶ್ ವಿಶ್ವಕರ್ಮ ಹಾಗೂ ತಂಡದಿಂದ ಮಣ್ಣು ಮತ್ತು ನೀರು ಸಂರಕ್ಷಣೆಯ ಯಕ್ಷ ರೂಪಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಸರ್ವಋತು ಹಲಸಿನ ಗಿಡ ನಾಟಿ ಮಾಡಲಾಯಿತು.
ಜಲಾನಯನ ಅಭಿವೃದ್ಧಿ ಯೋಜನೆಯಡಿ ಸೃಜಿಸಲಾದ ತೋಟಗಾರಿಕೆ ಘಟಕದಲ್ಲಿ ಶ್ರಮದಾನ ಮಾಡಲಾಯಿತು. ಕೃಷಿ ಇಲಾಖೆ ಸಿಬ್ಬಂದಿ ದಿವ್ಯಾ, ತ್ರಿನೇತ್ರಾ, ಸಂದೀಪ್ ಸಹಕರಿಸಿದರು. ಮಂಗಳೂರು ಉಪವಿಭಾಗ ಉಪಕೃಷಿ ನಿರ್ದೇಶಕ ಡಾ.ಅಶೋಕ್ ಪ್ರಸ್ತಾವನೆಗೈದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್. ಸ್ವಾಗತಿಸಿದರು. ಪಾಣೆಮಂಗಳೂರು ಹೋಬಳಿ ಆತ್ಮಯೋಜನೆ ಎಟಿಯಂ ಹನಮಂತ ಕಾಳಗಿ ವಂದನಾರ್ಪಣೆ ಮಾಡಿದರು..ಕೃಷಿ ಅಧಿಕಾರಿ ನಂದನ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.