ಬಂಟ್ವಾಳ: ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮ ಅಂಗವಾಗಿ ನ. 28, 29, 30ರಂದು ಭಾವಾಭಿವ್ಯಕ್ತಿ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ನಡೆಯಲಿದೆ.
ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕರು ಮತ್ತು ಜೈನ್ (ಡಿಮ್ಡ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕರಾಗಿರುವ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯೆ ಹಾಗೂ ಜೈನ್ (ಡಿಮ್ಡ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಸಂಶೋಧಕ ಮತ್ತು ಉಪನ್ಯಾಸಕರಾಗಿರುವ ದೀಪ್ತಿ ರಾಧಾಕೃಷ್ಣ ಭರತನಾಟ್ಯ ಕಾರ್ಯಗಾರ ನಡೆಸಿಕೊಡಲಿದ್ದಾರೆ. ದಿನಾಂಕ 28 ರಂದು ಸಂಜೆ 6 ರಿಂದ ಇವರೀರ್ವರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ