ತಾಲೂಕು ಮಟ್ಟದ ಆಟೊ ರಿಕ್ಷಾ ಚಾಲಕ ಮಾಲೀಕರ ಸಂಘದಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಪ್ರಥಮ ವರ್ಷದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ವಹಿಸಿದ್ದರು.
ಸಂಚಾರ ಪೊಲೀಸ್ ಠಾಣೆ ಎಸ್.ಐ. ಸುತೇಶ್, ಭಾರತೀಯ ಮಜ್ದೂರ್ ಸಂಘ ದ.ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಕಾನೂನು ಸಲಹೆಗಾರ. ಪಿ. ಜಯರಾಮ ರೈ , ಬಿಎಂಎಸ್ ಸ್ಥಾಪಕರಾದ ಗೋವಿಂದ ಪ್ರಭು, ರೋಹಿತಾಶ್ವ ಎಂ , ಬಿಎಂಎಸ್ ಟೆಂಪೊ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಸದಾನಂದ ಹಳೆಗೇಟು, ನಾರಾಯಣ ಪೂಜಾರಿ, ಸುರೇಶ್, ಸತೀಶ್ ಭಂಡಾರಿಬೆಟ್ಟು, ಅಶೋಕ್, ನಿಶಾಂತ್ ಉಪಸ್ಥಿತರಿದ್ದರು.
ನವೀನ್ ಪಾಣೆಮಂಗಳೂರು ಸ್ವಾಗತಿಸಿದರು , ಉಮಾಶಂಕರ್ ಪ್ರಸಾದ್ ಹನುಮಾನ್ ನಗರ ಕಾರ್ಯಕ್ರಮ ನಿರೂಪಿಸಿ ,ಧನ್ಯವಾದ ತಿಳಿಸಿದರು