ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸರ್ಕಲ್ ಬಳಿ ಸೇತುವೆಯಿಂದ ಬಿ.ಸಿ.ರೋಡ್ ಕಡೆ ಬರುವ ಮಾರ್ಗದಲ್ಲೀಗ ಕಂಪನ ಪಟ್ಟಿ (ರಂಬ್ಲರ್ ಸ್ಟ್ರಿಪ್ಸ್) rumbler srtip ಅಳವಡಿಸಲಾಗಿದೆ. ವೇಗವಾಗಿ ಬರುವ ವಾಹನಗಳನ್ನು ನಿಯಂತ್ರಿಸಲೆಂದು ಇವುಗಳನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಕಿದೆ. ಕೆಲ ದಿನಗಳ ಹಿಂದೆ ಸರ್ಕಲ್ ಗೆ ಇನ್ನೋವಾ ಕಾರು ಬಡಿದು, ಕಾರಲ್ಲಿದ್ದ ಇಬ್ಬರು ಮೃತಪಟ್ಟ ಘಟನೆಯ ತರುವಾಯ ಈ ಕ್ರಮ ಕೈಗೊಳ್ಳಲಾಗಿದೆ. ಅಪಘಾತ ನಡೆದ ಬಳಿಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದರು. ಟ್ರಾಫಿಕ್ ಪೊಲೀಸರು ಈ ಕುರಿತು ಮನವಿಯನ್ನು ಮಾಡಿದ್ದರು.
ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಚತುಷ್ಪಥಗೊಳ್ಳುತ್ತಿದ್ದ, ಬಿ.ಸಿ.ರೊಡ್ ನಿಂದ ಮಾಣಿವರೆಗೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಹಲವೆಡೆ ಸೂಚನಾ ಫಲಕ ಅಳವಡಿಕೆಗಳು ಆಗಿಲ್ಲ. ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಈಗಾಗಲೇ ಬೀದಿ ಬದಿ ವ್ಯಾಪಾರಿಗಳು ಜಾಗ ಅತಿಕ್ರಮಣವನ್ನೂ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಹನಗಳು ವೇಗವಾಗಿ ಸಾಗುತ್ತಿವೆ. ನಾರಾಯಣಗುರು ಸರ್ಕಲ್ ಬಳಿ ಹೆದ್ದಾರಿಗೆ ಕಂಪನ ಪಟ್ಟಿ ಅಳವಡಿಸಲಾಗಿದೆ. ವಾಹನಗಳ ವೇಗ ಮಿತಿ ಮತ್ತು ಅಪಘಾತ ತಡೆ ಇದರ ಮೂಲ ಉದ್ದೇಶ.
ಸರ್ಕಲ್ ಬಳಿ ವಾಹನಗಳ ಅಪಘಾತ ತಡೆಯಲು ರಸ್ತೆಗೆ ಕಂಪನ ಪಟ್ಟಿಗಳನ್ನು ಅಳವಡಿಸುವಂತೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ರಸ್ತೆಯ ಕಾಮಗಾರಿ ನಡೆಯುವ ವೇಳೆ ನಡೆದ ಜಂಟಿ ಸರ್ವೇ ವೇಳೆ ಕೂಡ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಲಾಖೆಯವರಲ್ಲಿ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಕೇಳಿ ಕೊಂಡಿದ್ದರು.
ರಂಬ್ಲರ್ ಸ್ಟ್ರಿಪ್ಸ್ ಲಾಭವೇನು?