ಹೋಟೆಲ್ ಬಳಿ ಬಸ್ ನಿಲ್ಲಿಸಿದ್ದ ವೇಳೆ ಬಸ್ಸಿನಲ್ಲಿಟ್ಟಿದ್ದ ಬ್ಯಾಗಿನಲ್ಲಿ ಚಿನ್ನಾಭರಣ ಕಳವಾದ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಸುಮಾರು 134 ಗ್ರಾಂ ತೂಕದ ಅಂದಾಜು ಮೌಲ್ಯ ಸುಮಾರು 14 ಲಕ್ಷ ರೂಪಾಯಿಯ ಚಿನ್ನಾಭರಣಗಳು ಕಳವಾಗಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬ್ರಹ್ಮಾವರ ತಾಲೂಕಿನ ವಾಸುದೇವ ಸೂರ್ಯ ಎಂಬವರು ದೂರು ನೀಡಿದ್ದು, ತನ್ನ ಪತ್ನಿ ಶಂಕರಿ ಜೊತೆ ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ಕೆಂದು ಬಸ್ಸಿನಲ್ಲಿ ಬುಧವಾರ ಹೊರಟಾಗ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬ್ರಹ್ಮಾವರದಿಂದ ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಹೋಗುವ ಖಾಸಗಿ ಬಸ್ಸಿಗೆ ಹತ್ತಿ ಪ್ರಯಾಣಿಸಿದ್ದು, ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು (ಹೆದ್ದಾರಿ ಬದಿಯಲ್ಲಿರುವ ಕಲ್ಲಡ್ಕಕ್ಕಿಂತ ಮುಂದೆ) ವಿನಲ್ಲಿರುವ ಹೊಟೇಲ್ ಬಳಿ ಬಸ್ ನಿಂತಿದ್ದು ಆ ಸಂದರ್ಭ, ಬಸ್ಸಿನಿಂದ ಇಳಿದು ಹೋಗಿ ವಾಪಾಸು ಬಸ್ಸಿನ ಒಳಗೆ ಬಂದು ತಾವು ಕುಳಿತಿದ್ದ ಸೀಟಿನಲ್ಲಿ ನೋಡಿದಾಗ ಚಿನ್ನ ಇಟ್ಟಿದ್ದ ಪರ್ಸ್ ಸೀಟಿನಲ್ಲಿ ಬಿದ್ದುಕೊಂಡಿದ್ದು ನೋಡಿದಾಗ, ಪರ್ಸಿನಲ್ಲಿ ಇದ್ದ ಚಿನ್ನಾಭರಣಗಳು ಕಂಡುಬಂದಿರುವುದಿಲ್ಲ. ಯಾರೋ ಕಳ್ಳರು ಬಸ್ಸಿನೊಳಗೆ ಬಂದು ಪರ್ಸಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರ್ಸನ್ನು ಅಲ್ಲೇ ಬಿಟ್ಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದ ತಲಾ 8 ಗ್ರಾಂ ತೂಕದ 4 ಚಿನ್ನದ ಬಳೆಗಳು, ಸುಮಾರು 24 ಗ್ರಾಂ ತೂಕದ ಚಿನ್ನದ ಕೊತ್ತಂಬರಿ ಸರ, ಸುಮಾರು 16 ಗ್ರಾಂ ತೂಕದ ಚಿನ್ನದ ಮಿಶ್ರಿ ಸರ, ಸುಮಾರು 16 ಗ್ರಾಂ ತೂಕದ ಚಿನ್ನದ ಲಕ್ಮ್ಷೀ ಪದಕವಿರುವ ಹವಳದ ಸರ, ಸುಮಾರು 12 ಗ್ರಾಂ ತೂಕದ ಹಸಿರು ಕಲ್ಲಿನ ಪದಕವಿರುವ ಚಿನ್ನದ ಸರ, ಸುಮಾರು 10 ಗ್ರಾಂ ತೂಕದ ಮುತ್ತಿನ ಸರ, ತಲಾ 2 ಗ್ರಾಂ ತೂಕದ 4 ಚಿನ್ನದ ಉಂಗುರ ಮತ್ತು ತಲಾ 4 ಗ್ರಾಂ ತೂಕದ 4 ಜೊತೆ ಚಿನ್ನದ ಬೆಂಡೋಲೆ ಯನ್ನು ತನ್ನ ಪರ್ಸಿನಲ್ಲಿ ತುಂಬಿಸಿ ಬಟ್ಟೆ ಬರೆ ಇರುವ ಬ್ಯಾಗಿನಲ್ಲಿಡಲಾಗಿತ್ತು ಎಂದವರು ದೂರಿನಲ್ಲಿ ವಿವರಿಸಿದ್ದಾರೆ.