2025ನೇ ಸಾಲಿಗೆ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ, ಸ್ವಸಹಾಯದ ಸಂಘದ ಸದಸ್ಯರಿಗೆ ಐದು ವಾರದ ತಲಾ 20 ನಾಟಿ ಕೋಳಿಮರಿಗಳನ್ನು ವಿತರಿಸುವ ಯೋಜನಾ ಕಾರ್ಯಕ್ರಮ ಕರ್ನಾಟಕ ಸಹಕಾರ ಕುಕ್ಕುಟ ಮಂಡಲ ಬೆಂಗಳೂರು ಸೂಚನೆಯಂತೆ ನಡೆಯಲಿದ್ದು, ಬಂಟ್ವಾಳ ತಾಲೂಕಿನ 99 ಫಲಾನುಭವಿಗಳ ಆಯ್ಕೆ ನಡೆಯಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಪಶುವೈದ್ಯಾಧಿಕಾರಿ ಡಾ. ಉಮೇಶ್ ಕಿರಣ್ ತಿಳಿಸಿದ್ದಾರೆ.
ಆಸಕ್ತ ಮಹಿಳೆಯರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ನ.29ರೊಳಗೆ ಸಲ್ಲಿಸಲು ಸೂಚಿಸಲಾಗಿದ್ದು, ಸಮೀಪದ ಪಶುಸಂಗೋಪನಾ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.