ಟೂರಿಸ್ಟ್ ವ್ಯಾನ್ ಚಾಲಕ ಮಾಲೀಕರ ಸಂಘದ ಅಧ್ಯಕ್ಷರಾಗಿ ಸದಾನಂದ ಗೌಡ ಹಳೇಗೇಟು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಬಿ.ಸಿ.ರೋಡಿನ ರಿಕ್ಷಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಇಕ್ಬಾಲ್ ಬಿಸಿ ರೋಡ್ ,ಕಾರ್ಯದರ್ಶಿಯಾಗಿ ಸುನಿಲ್ ಲೋಬೊ ,ಕೋಶಾಧಿಕಾರಿಯಾಗಿ ನಮೇಶ್ ಶೆಟ್ಟಿ ಕುರಿಯಾಳ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ಕಾರ್ಲೋ ರಿಯಾಜ್ ಜವಾನ್, ಗಣೇಶ್ ಕಲ್ಲಡ್ಕ ,ರಿಯಾಜ್ ಬದ್ರಿಯಾ , ಚಂದ್ರಹಾಸ ಸಾಲೆತ್ತೂರು,ಸುಧಾಕರ್ ತುಂಬೆ, ಜಬ್ಬರ್ ಅಜಿಲಮೊಗರು ,ನಿತಿನ್ ಅಜಿಬೆಟ್ಟು ಆಯ್ಕೆಯಾದರು ಸಂಘದ 70 ಸದಸ್ಯರು ಉಪಸ್ಥಿತರಿದ್ದರು. ಇಕ್ಬಾಲ್ ಸ್ವಾಗತಿಸಿ ಸುನಿಲ್ ಲೋಬೊ ವಂದಿಸಿದರು.