ಲೊರೆಟ್ಟೊದಲ್ಲಿರುವ ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆ ಸಿ.ಬಿ.ಎಸ್.ಇಯಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ಪ್ರಿನ್ಸಿಪಾಲ್ ಫಾ. ಜೇಸನ್ ವಿಜಯ್ ಮೊನಿಸ್, ಮುಖ್ಯ ಅತಿಥಿಯಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮನ್ವಯಾಧಿಕಾರಿ ಪ್ರತಿಮಾ ವೈ.ವಿ. ಆಗಮಿಸಿದ್ದರು.ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರೊಡ್ನಿ ಐವಾನ್ ಡಿಸೋಜಾ ಮತ್ತು ಉಪಪ್ರಾಂಶುಪಾಲೆ ಅನಿತಾ ಪೈಸ್ ಉಪಸ್ಥಿತರಿದ್ದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಹಾಗೂ ಜವಾಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಶಿಕ್ಷಕರು ಮತ್ತು ಪೋಷಕರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.