ಬಂಟ್ವಾಳ: ಬಿಸಿರೋಡಿನ ಸರ್ಕಲ್ ನಲ್ಲಿ ಇಂದು ಮುಂಜಾನೆ ಬೀಕರ ವೇಳೆ ನಡೆದ ಕಾರು ಅಪಘಾತ ಸಂಭವಿಸಿದೆ. ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಖರ ಮಾಹಿತಿ ತಿಳಿದುಬಂದಿಲ್ಲ..
ಕಾರು ಬೆಂಗಳೂರು ಮೂಲದ್ದಾಗಿದೆ ಮತ್ತು ಪ್ರಯಾಣಿಕರು ಕೂಡ ಬೆಂಗಳೂರಿನವರು ಎಂದು ಹೇಳಲಾಗುತ್ತಿದೆ ಈವರೆಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ ಎಂದು ಟ್ರಾಫಿಕ್ ಪೋಲೀಸರು ತಿಳಿಸಿದ್ದಾರೆ.
ಮುಂಜಾನೆ 4.40 ರ ಸುಮಾರಿಗೆ ಬೆಂಗಳೂರು ಕಡೆಯಿಂದ ಬಂದ ಇನ್ನೋವಾ ಕಾರು ಬಿಸಿರೋಡಿನ ಎನ್.ಜಿ ಸರ್ಕಲ್ ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ.
ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನೂ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಲಾಗಿದೆ.
ಸ್ಥಳದಲ್ಲಿ ಬಂಟ್ವಾಳ ಟ್ರಾಫಿಕ್ ಪೋಲೀಸರು ಇದ್ದು ಸಂಚಾರಕ್ಕೆ ತೊಡಕಾಗಿದ್ದ ಕಾರನ್ನು ಶ್ರೀ ದುರ್ಗಾರಾಜರಾಜೇಶ್ವರಿ ಕ್ರೇನ್ ಬಳಸಿ ತೆಗೆಯಲಾಗಿದೆ.