ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಬಂಟ್ವಾಳದ 14ನೇ ಸಂಗಬೆಟ್ಟು ಶಾಖೆಯು ಸಂಗಬೆಟ್ಟು ಸುದರ್ಶನ ಕಾಂಪ್ಲೆಕ್ಸ್ ನಲ್ಲಿ ನ.8ರ ಶನಿವಾರ ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೀಪ ಪ್ರಜ್ವಲನೆ ಮಾಡುವರು. ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು ಎಂದು ಸಂಘ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ಅಭ್ಯಾಗತರಾಗಿ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣಪ್ರಸಾದ್ ಆಸ್ರಣ್ಣ, ಸಿದ್ಧಕಟ್ಟೆ ಚರ್ಚ್ ಧರ್ಮಗುರು ಫಾ.ಡೇನಿಯಲ್ ಡಿಸೋಜ, ಸಂಗಬೆಟ್ಟು ಕೆರೆಬಳಿ ಮಸೀದಿ ಖತೀಬರಾದ ಜಿ.ಎಸ್.ಅನ್ಸಾರ್ ಸಖಾಫಿ ಆಲ್ ಹಿಕಮಿ ಭಾಗವಹಿಸುವರು. ಭದ್ರತಾ ಕೊಠಡಿಯನ್ನು ಧವಳಾ ಕೋಆಪ್ ಸೊಸೈಟಿ ಅಧ್ಯಕ್ಷ ಸುದರ್ಶನ ಜೈನ್, ಕಂಪ್ಯೂಟರ್ ಅನ್ನು ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ಉದ್ಘಾಟಿಸುವರು. ನಿರಖು ಠೇವಣಿಪತ್ರ ಬಿಡುಗಡೆಯನ್ನು ಟೀಚರ್ಸ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ನಿತ್ಯನಿಧಿ ಠೇವಣಿಯನ್ನು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಬಿಡುಗಡೆಗೊಳಿಸುವರು ಎಂದರು.
ಉಪಾಧ್ಯಕ್ಷ ಮಂಜುನಾಥ ರೈ, ನಿರ್ದೇಶಕರಾದ ವಿಜಯ ಕುಮಾರಿ ಇಂದ್ರ, ಲೋಕೇಶ್ ಸುವರ್ಣ, ರವೀಂದ್ರ, ಸಿಇಒ ಅಜಿತ್ ಕುಮಾರ್ ಜೈನ್, ಲೆಕ್ಕಪರಿಶೋಧಕ ಸದಾಶಿವ ಪುತ್ರನ್, ಶಾಖಾ ವ್ಯವಸ್ಥಾಪಕರಾದ ಮೋಹನ್ ಜಿ. ಮೂಲ್ಯ, ಸಪ್ನಾ ಕಾಜವ, ಜೀತೇಶ್ ಕುಮಾರ್ ಜೈನ್, ನಿಶಾ ಶ್ರವಣ್, ಸಿಬ್ಬಂದಿಗಳಾದ ದಿವಾಕರ್, ಸಂದೇಶ್, ಉಪಸ್ಥಿತರಿದ್ದರು