ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಸಾರಥ್ಯದಲ್ಲಿ ನವೀಕರಣಗೊಂಡ ನಿಟಿಲಾಕ್ಷ ಸದಾಶಿವ ದೇವರ ಅಮ್ಟೂರಿನ ನೂತನ ಕಟ್ಟೆಯಲ್ಲಿ, ಅಶ್ವಥ ಉದ್ಯಾಪನೆ ಕಟ್ಟೆಪೂಜೆ ಸಂಕೀರ್ತನೆ ನೆರವೇರಿತು.
ಮದ್ಯಾಹ್ನ ಅಶ್ವತ್ಥಕಟ್ಟೆ ಉದ್ಯಾಪನೆಗೊಂಡು ಮಹಾಪೂಜೆ ಬಳಿಕ ರಾತ್ರಿ ದೇವರ ಕಟ್ಟೆ ಪೂಜೆ ನೆರವೇರಿತು.
ಬೆಳಿಗ್ಗೆ ಸೂರ್ಯೋದಯ ದಿಂದ ರಾತ್ರಿವರೆಗೆ ಭಜನಾ ಸೇವೆ ಜರುಗಿತು. ಸುಮಾರು 20ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿ, ವಸುಧೈವ ಭಜನಾ ಕುಟುಂಬ ಅಖಂಡ ಭಾರತದ ಸರ್ವ ಭಜಕರೆಲ್ಲ ಸೇರಿ ಮಂಗಳೋತ್ಸವ ನೆರವೇರಿಸಿದರು. ಹಲವು ಗಣ್ಯರು, ವಿಶೇಷ ಅತಿಥಿಗಳು,ಸಂಗೀತ ಕಲಾವಿದರು, ಭಜಕರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಿ, ಸುಮಾರು 1700 ಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.