ಮಂಗಳೂರು: ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಹಾಗೂ ದಾಯ್ಜಿವರ್ಲ್ಡ್ ವಾಹಿನಿ ವತಿಯಿಂದ ಭರತನಾಟ್ಯ ಟಿವಿ ರಿಯಾಲಿಟಿ ಶೋ (ಕರ್ನಾಟಕದಲ್ಲಿ ಪ್ರಥಮ ಬಾರಿಗೆ) ಪ್ರತಿ ಶನಿವಾರ ರಾತ್ರಿ 9ಕ್ಕೆ ನಡೆಯಲಿದೆ. ದಾಯ್ಜಿವರ್ಲ್ಡ್ ಟಿ.ವಿ.ವಾಹಿನಿಯಲ್ಲಿ ಪ್ರಸಾರಗೊಳ್ಳುವ ನಟನಂ ಹೆಸರಿನ ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರತಿಭೆಗಳ ಪ್ರದರ್ಶನವಿರಲಿದೆ ಎಂದು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.