ಬಂಟ್ವಾಳ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಪದಗ್ರಹಣ, ನಿರಂತರ ಕಲಿಕಾ ಕಾರ್ಯಕ್ರಮ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ರಾಮದಾಸ್ ಶೆಣೈ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ರಿಚರ್ಡ್ ಡಿಸೋಜ ಬಂಟ್ವಾಳ ರೋಶನಿ ಮೆಡಿಕಲ್, ಕಾರ್ಯದರ್ಶಿಯಾಗಿ ಚಂದ್ರಶೇಖರ್ ರೈ ಗಣೇಶ್ ಮೆಡಿಕಲ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ಜಯಕೀರ್ತಿ ಶ್ರೀದೇವಿ ಮೆಡಿಕಲ್ ಬಿಸಿ ರೋಡ್, ಉಪಾಧ್ಯಕ್ಷರಾಗಿ ಸುಕುಮಾರ ಸಿಟಿ ಮೆಡಿಕಲ್ ಫರಂಗಿಪೇಟೆ ಅಧಿಕಾರ ಸ್ವೀಕರಿಸಿದರು.
ಪಾಣೆಮಂಗಳೂರು ಶ್ರೀ ದುರ್ಗಾ ಮೆಡಿಕಲ್ಸ್ ನ ಪ್ರಭಾಕರ ಭಟ್ ಪದಗ್ರಹಣ ನೆರವೇರಿಸಿದರು. ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪನಿಯಂತ್ರಣಾಧಿಕಾರಿ ಟಿ.ಪಿ.ಸುಜಿತ್ ಮಾತನಾಡಿ, ಸಲಹೆ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅರುಣ್ ಶೆಟ್ಟಿ, ಕಾರ್ಯದರ್ಶಿ ಡಾ. ಎ.ಕೆ.ಜಮಾಲ್ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು. ಮೆಲ್ಕಾರ್ ಪದ್ಮವಿಕಾಸ್ ಮೆಡಿಕಲ್ ನ ರಾಜೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಸಲಹೆ ಸೂಚನೆಯನ್ನು ವಿನಯ ರೈ ಗಣೇಶ್ ಮೆಡಿಕಲ್ ಬಿಸಿ ರೋಡ್.ನೀಡಿದರು ಚಂದ್ರಶೇಖರ ರೈ ವಂದಿಸಿದರು.