ಇಂದಿನ ವಿಶೇಷ

ಲ್ಯುಕೇಮಿಯಾ ಚಿಕಿತ್ಸೆ (ರಕ್ತಕ್ಯಾನ್ಸರ್)ಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಮೈತ್ರಾ ಆಸ್ಪತ್ರೆ…ಏನಿದರ ವಿಶೇಷ?

ಕೋಯಿಕ್ಕೋಡ್: ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಚಿಕಿತ್ಸೆಯಲ್ಲಿ ಕೇರಳದ ಪ್ರಸಿದ್ಧ ಆಸ್ಪತ್ರೆಯಾದ ಮೈತ್ರಾ ಆಸ್ಪತ್ರೆ ಹೊಸ ಮೈಲುಗಲ್ಲನ್ನು ಸಾಧಿಸಿದೆ. CAR-T ಕೋಶ ಚಿಕಿತ್ಸೆ ಮೂಲಕ ರಕ್ತ ಕ್ಯಾನ್ಸರ್ ವಾಸಿ ಮಾಡುವತ್ತ ಹೆಜ್ಜೆ ಹಾಕಿದೆ. ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದ್ದ ಈ ರೋಗಕ್ಕೆ ಸಂಬಂಧಪಟ್ಟವರು ಇದರಿಂದ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

ಏನಿದರ ವಿಶೇಷ?

ಜಾಹೀರಾತು

ಮೈತ್ರಾ ಅಡ್ವಾನ್ಸ್ಡ್ ಕ್ಯಾನ್ಸರ್ ಕೇರ್ (Meitra Advanced Cancer Care)ಸಿಆಆರ್-ಟಿ CAR-T cell therapy ಕೋಶ ಚಿಕಿತ್ಸೆಯನ್ನು 25 ವರ್ಷದ ಲ್ಯುಕೇಮಿಯಾ ರೋಗಿಗೆ ಮಾಡಿ ಯಶಸ್ವಿಯಾಗಿದ್ದಾರೆ.

ರೋಗಿಗಳಿಗೆ ವೈಯಕ್ತಿಕವಾಗಿ ಗಮನಹರಿಸಿ, ಅವರನ್ನು ಗುಣಪಡಿಸುವುವುದು ಚಿಕಿತ್ಸೆಯ ಭಾಗವೂ ಹೌದು. ಕ್ಯಾನ್ಸರ್ ರೋಗಿಗಳಿಗೂ ಇದು ಬೇಕಾದ ಅಂಶವಾಗಿದೆ.ಇನ್ಯುನೋಥೆರಪಿ (Immunotherapy) ಎಂದು ಹೇಳಲಾಗುವ ಈ ಚಿಕಿತ್ಸೆ ವಿಧಾನವೀಗ ಕ್ಯಾನ್ಸರ್ ಚಿಕಿತ್ಸೆಯ ಭವಿಷ್ಯದ ವಿಧಾನ ಎಂದೇ ಪರಿಗಣಿಸಲಾಗುತ್ತಿದೆ.

ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್ ಟಿ ಸೆಲ್ ಥೆರಪಿ (Chimeric Antigen Receptor T-Cell Therapy)ಯ ಮೂಲಕ ಸುಧಾರಿತ ತಂತ್ರಜ್ಞಾನ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಟಿ-ಕೋಶಗಳು (T-cells)ಚಿಕಿತ್ಸೆಯಲ್ಲಿ ರೋಗಿಯ ಸ್ವಂತ ರೋಗನಿರೋಧಕ ಕೋಶಗಳನ್ನು ಸಂಗ್ರಹಿಸಲಾಗುತ್ತದೆ. ಹಾಗೆಯೇ ಅದನ್ನು ಜೆನೆಟಿಕ್ (ಆನುವಂಶಿಕ) ಆಗಿ ಮಾರ್ಪಾಡು ಮಾಡಿ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಿ ಅದನ್ನು ನಾಶಪಡಿಸುವಂತೆ ಮಾಡಲಾಗುತ್ತದೆ. ಇದಕ್ಕೆ ಟಿ-ಕೋಶ ಚಿಕಿತ್ಸೆ ಎನ್ನಲಾಗುತ್ತದೆ.

ಇದಾದ ಬಳಿಕ ಈ ಜೀವಕೋಶಗಳನ್ನು ರೋಗಿಯ ದೇಹಕ್ಕೆ ಮರಳಿಸಿ, ಕ್ಯಾನ್ಸರ್ ವಿರೋಧಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಟ್ಟಿಗೊಳಿಸಲಾಗುತ್ತದೆ.
ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ನಿಷ್ಫಲವಾದ ಸಂದರ್ಭ, ರೋಗಿಗಳನ್ನು ಗುಣಪಡಿಸಲು ಬಳಸಲಾಗುವ ಈ ಚಿಕಿತ್ಸಾ ವಿಧಾನದಿಂದಾಗಿ ಕ್ಯಾನ್ಸರ್ ಚಿಕಿತ್ಸಾ ಆಧುನಿಕ ಪದ್ಧತಿಯಲ್ಲಿ ಹೊಸ ಬಾಗಿಲನ್ನು ತೆರೆದಂತಾಗಿದೆ.

ಮೈತ್ರಾ ಆಸ್ಪತ್ರೆ ವೈದ್ಯರ ತಂಡ ಸಾಧನೆ:

ಈ ಸಾಧನೆಯನ್ನು ಮೈತ್ರಾ ಆಸ್ಪತ್ರೆಯ ವೈದ್ಯರ ತಂಡ ಮಾಡಿದ್ದು, ಹೊಸ ದಾಖಲೆಯಾಗಿದೆ. ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಡಿಪಾರ್ಟ್ ಮೆಂಟ್ (ಅಸ್ತಿಮಜ್ಜೆ ಕಸಿ ವಿಭಾಗ) ಸೀನಿಯರ್ ಕನ್ಸಲ್ಟೆಂಟ್ ಆಗಿರುವ ಡಾ. ರಾಗೇಶ್ ರಾಧಾಕೃಷ್ಣನ್ ನಾಯರ್, ಹಾಗೂ ಕನ್ಸಲ್ಟೆಂಟ್ ಗಳಾದ ಡಾ. ಅಜಯ್ ಶಂಕರ್ Dr. Ajay Shankar ಮತ್ತು ಡಾ.  ವಿಷ್ಣು ಶ್ರೀದುತ್ Dr. Vishnu Sriduth. ತಂಡದಲ್ಲಿರುವ ಸಾಧಕ ವೈದ್ಯರು.ಈ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಒದಗಿಸುವ ಮೂಲಕ, ಮೈತ್ರಾ ಆಸ್ಪತ್ರೆ ಕೇರಳದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಹೊಸ ಸಾಧ್ಯತೆಗಳನ್ನು ಹಾಗೂ ಹೊಸ ಹಾದಿಯನ್ನು ತೆರೆದಿದೆ.

ಜಾಹೀರಾತು
NEWSDESK

www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ, ಲೇಖನಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ. NOTE: : All opinions regarding the advertisments and articles published in bantwalnews and the related topic are those of the author and advertiser, and this has no relation to BantwalNews. Recommendations and suggestions provided here are left for the readers' consideration.