ಬಂಟ್ವಾಳ: ಮರ್ಹೂಂ ಬಾಂಬಿಲ ಅಮ್ಮಚ್ಚಬ್ಬ ಮತ್ತು ಬಿಫಾತುಮ್ಮ ಅವರ ಸವಿನೆನಪಿಗಾಗಿ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಸಬಲೀಕರಣದ ಉದ್ದೇಶದೊಂದಿಗೆ ಅ.25ರಂದು ಎ ಬಿ ಫೌಂಡೇಶನ್ ಆಸ್ಥಿತ್ವಕ್ಕೆ ಬಂತು.
ಇದರ ಪ್ರಥಮ ಸಭೆ ಝೂಮ್ ಮೀಟಿಂಗ್ ಆಪ್ ನಲ್ಲಿ ಹಾಜಿ ಇಕ್ರಮುಲ್ಲಾ ಕಾಮಿಲ್ ಸಖಾಫಿ ಗೂಡಿನಬಳಿ ಮುಂದಾಳತ್ವದಲ್ಲಿ ನಡೆಯಿತು. ಪ್ರಥಮ 2025-2026ರ ಅವಧಿಗೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಹಾಜಿ ಇಕ್ರಮುಲ್ಲಾ ಕಾಮಿಲ್ ಸಖಾಫಿ ಗೂಡಿನಬಳಿ, ಅಧ್ಯಕ್ಷರು: ಅನ್ವರ್ ಬಾಂಬಿಲ ( ಸೌದಿ ಅರೇಬಿಯ), ಉಪಾಧ್ಯಕ್ಷರು: ನಿಸಾರ್ ಟಿ.ಎಚ್.ಕುದ್ರಡ್ಕ, (ಗ್ರಾ.ಪಂ.ಸದಸ್ಯರು ತಣ್ಣೀರುಪಂಥ), ಮತ್ತು ಹಾಜಿ ಕಮರ್ ಪಂಜೋಡಿ(ಸೌದಿ ಅರೇಬಿಯ), ಪ್ರ.ಕಾರ್ಯದರ್ಶಿ: 1.ಅಝರ್ ಪಂಜೋಡಿ, ಜೊತೆ ಕಾರ್ಯದರ್ಶಿ: ಝಾಕಿರ್ ಬಾಂಬಿಲ, ಪ್ರ.ಕಾರ್ಯದರ್ಶಿ: 2.ಜಫರುಲ್ಲಾ ಗೂಡಿನಬಳಿ(ಸೌದಿ ಅರೇಬಿಯ) ಜೊತೆ ಕಾರ್ಯದರ್ಶಿ: ನಝೀರ್ ಬಾಂಬಿಲ(ಸೌದಿ ಅರೇಬಿಯ)
ಕೋಶಧಿಕಾರಿ: ಅಶ್ರಫ್ ನಾಳ (ಸೌದಿ ಅರೇಬಿಯ) ಮತ್ತು ಆಸಿಫ್ ಬಾಂಬಿಲ, ಲೆಕ್ಕ ಪರಿಶೋಧಕರು: ಅಮೀನ್ ಪಂಜೋಡಿ (ಸೌದಿ ಅರೇಬಿಯ), ಗೌರವ ಸಲಹೆಗಾರರು: ಹಾಜಿ ಅಬ್ದುಲ್ ವಹಾಬ್ ಪಂಜೋಡಿ ಮತ್ತು ಅಲ್ತಾಫ್ ಬಾಂಬಿಲ , ಮಾದ್ಯಮ ,ಕುಟುಂಬ ಮತ್ತು ಸಂಘಟನಾ ಕಾರ್ಯದರ್ಶಿ: ಇಂತಿಯಾಝ್ ಕುದ್ರಡ್ಕ (ಸೌದಿ ಅರೇಬಿಯ), ಕಾರ್ಯಕಾರಿ ಸಮಿತಿ ಸದಸ್ಯರು:, ನೂರುದ್ದೀನ್ ಪಂಜೋಡಿ, ಶರೀಫ್ ಬಾಂಬಿಲ(ಸೌದಿ ಅರೇಬಿಯ), ಹನೀಫ್ ಬಾಂಬಿಲ(ಸೌದಿ ಅರೇಬಿಯ), ಹಮೀದ್ ನಾಳ (ಸೌದಿ ಅರೇಬಿಯ)
ಮನ್ಸೂರ್ ಬಾಂಬಿಲ(ಸೌದಿ ಅರೇಬಿಯ), ಹೈದರ್ ಪಂಜೋಡಿ, ರಿಯಾಝ್ ಕುದ್ರಡ್ಕ, ಅಮಾನ್ ಗೂಡಿನಬಳಿ, ನವಾಝ್ ಕುದ್ರಡ್ಕ
ಜಾಫರ್ ಪಂಜೋಡಿ, ಝಮೀರ್ ಬಾಂಬಿಲ, ಇವರು ಆಯ್ಕೆ ಯಾದರು.
ಇಂತಿಯಾಝ್ ಕುದ್ರಡ್ಕ (ಸೌದಿ ಅರೇಬಿಯ)ರವರ ಕಿರಾಅತ್ ಪಠಣದೊಂದಿಗೆ ಪ್ರಾರಂಭಗೊಂಡು, ಜಫರುಲ್ಲಾ ಗೂಡಿನಬಳಿ ಪ್ರಾಸ್ತಾವಿಕವಾಗಿ ಮಾತನಾಡಿ,ಎಲ್ಲರನ್ನೂ ಸ್ವಾಗತಿಸಿ, ಪ್ರಪ್ರಥಮ ಸಭೆಯ ಪ್ರಕ್ರಿಯೆಯನ್ನು ನಡೆಸಿದರು. ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡ ಅನ್ವರ್ ಬಾಂಬಿಲ ( ಸೌದಿ ಅರೇಬಿಯ) ರವರ ಹಿತನುಡಿ ಮತ್ತು ಅನಿವಾಸಿ ಉದ್ಯಮಿ ಅಶ್ರಫ್ ನಾಳ (ಸೌದಿ ಅರೇಬಿಯ) ರವರ ಧನ್ಯವಾದಗಳೊಂದಿಗೆ ಪ್ರಥಮ ಸಭೆಯು ಮುಕ್ತಾಯಗೊಂಡಿತು.