ಬಂಟ್ವಾಳ: ಸಹಕಾರ ತತ್ವಗಳನ್ನು ಅಳವಡಿಸಿ, ಠೇವಣಿ, ಸಾಲದ ವ್ಯವಹಾರವನ್ನು ನಡೆಸಿದರೆ ಅಭಿವೃದ್ಧಿಯ ಹಾದಿ ತೆರೆದುಕೊಳ್ಳುತ್ತದೆ, ಆಗ ಸೋಲೆಂಬುದೇ ಇರುವುದಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಕಲ್ಲಡ್ಕದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 24ನೇ ಕಲ್ಲಡ್ಕ ಶಾಖೆಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಗ್ರಾಹಕ ಸಹಕಾರಿ ಸಂಘದ ಜೀವಾಳ. ಸಾಲ ಪಡೆಯುವಾಗ ಇರುವ ಸಾಲದ ಕಂತು ಪಾವತಿಸುವಾಗಲೂ ಇರಬೇಕು. ಸಂಸ್ಕಾರ ಸಂಸ್ಕೃತಿಗಳಿಗೆ ಪೂರಕ ವ್ಯವಹಾರಗಳು ಆಗಭೇಕು ಸಹಕಾರ ತತ್ತ್ವ ಗಳನ್ನು ಅಳವಡಿಸಿಕೊಂಡು ಠೇವಣಿ, ಸಾಲದ ವ್ಯವಹಾರ ನಡೆಸಿಕೊಂಡಾಗ ಅಭಿವೃದ್ಧಿಯ ಹಾದಿ ತೆರೆದುಕೊಳ್ಳುತ್ತದೆ. ಈ ಭರವಸೆಯ ಹಾದಿಯಲ್ಲಿ ನಡದರೆ ಸೋಲು ಬರಲು ಸಾಧ್ಯವಿಲ್ಲ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ನುಡಿದರು.
ಈ ಸಂದರ್ಭ ಮಾತನಾಡಿದ ಸಾಧ್ವಿ ಶ್ರೀ ಮಾತಾನಂದಮಯೀ, ಸಹಕಾರ ಸಂಘದಲ್ಲಿ ವಿಶ್ವಾಸ ಶ್ರದ್ಧೆಯಿಂದ ತೊಡಗಿಸಿಕೊಂಡದ್ದರಿಂದ ಸಮೃದ್ಧಿಯಾಗಿದೆ ಗ್ರಾಹಕರು ಮತ್ತು ಸಂಘದ ನಡುವೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.
ಮಾಜಿ ಶಾಸಕ ಹಾಗೂ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕ ಎ..ರುಕ್ಮಯ ಪೂಜಾರಿ, ಬಂಟ್ವಾಳ ತಾಲೂಕು ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ. ಭಟ್, ಕಲ್ಲಡ್ಕ ಉಮಾಶಿವ ಕ್ಷೇತ್ರದ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಅಧಿಕಾರಿ
ನಂದನ್ ಜಿ. ಎನ್., ವಾಣಿಜ್ಯ ಸಂಕೀರ್ಣ ಮಾಲಕಿ ಲಲಿತಾ ರಾವ್, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ ಭಂಡಾರಿ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಇಂಜಿನಿಯರ್ ರಾಮಪ್ರಸಾದ್ ಕಲ್ಲಡ್ಕ ಶಾಖೆಯ ವ್ಯವಸ್ಥಾಪಕಿ ಅಶ್ವಿತಾ ಕೊಟ್ಟಾರಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಲಯ ಮೇಲ್ವಿಚಾರಕಿ ಜಯಲಕ್ಷ್ಮೀ ಪ್ರಭು, ಉಪಸ್ಥಿತರಿದ್ದರು. ಜಯಂತಿ ಪ್ರಾರ್ಥನೆ ಹಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಸುರೇಶ ರೈ ಎ.ಸ್ವಾಗತಿಸಿ, ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಲೋಕೇಶ್ ರೈ ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು