ಮಾಹಿತಿ

RSS ಆರೆಸ್ಸೆಸ್ ಶತಮಾನೋತ್ಸವ ಸ್ಮರಣಾರ್ಥ ನಾಣ್ಯದ ವಿಶೇಷವೇನು? ಪಡೆಯುವುದು ಹೇಗೆ?

ಜಾಹೀರಾತು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ರೂ.100 ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.  100 ರೂಪಾಯಿ ಬೆಳ್ಳಿಯ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನ, ಇನ್ನೊಂದು ಬದಿಯಲ್ಲಿ ಸಿಂಹ, ಅಭಯ ಮುದ್ರೆಯಲ್ಲಿರುವ ಭಾರತ ಮಾತೆಯ ಚಿತ್ರ ಮತ್ತು ಸ್ವಯಂಸೇವಕರು ಭಕ್ತಿಯಿಂದ ನಮಸ್ಕರಿಸುವ ಚಿತ್ರವಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಣ್ಯದಲ್ಲಿ ಭಾರತಮಾತೆಯ ಚಿತ್ರ ಹಾಕಲಾಗಿರುವ ಕುರಿತು ಹೇಳಲಾಗಿದೆ. ಈ ನಾಣ್ಯದ ಮೇಲೆ ಸಂಘದ ಧ್ಯೇಯವಾಕ್ಯ “ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ ಎಂದು ಬರೆಯಲಾಗಿದೆ. ಅಂದರೆ ಎಲ್ಲಾವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತೇನೆ. ಎಲ್ಲವೂ ರಾಷ್ಟ್ರದು, ನನ್ನದು ಏನು ಇಲ್ಲ ಎಂಬುದು ಇದರ ಅರ್ಥ. ಆದರೆ ಇದು ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವಂಥದ್ದಲ್ಲ. ಸಂಗ್ರಾಹಕರಿಗೆ ಹಾಗೂ ಆಸಕ್ತರಿಗೆ ಮಾತ್ರ ಇದರ ಉಪಯೋಗ.  ಹಾಗಾದರೆ ಇದು ಹೇಗಿರುತ್ತದೆ. ಹೇಗೆ ಪಡೆಯುವುದು? ಇಲ್ಲಿದೆ ಉತ್ತರ.

ಹೇಗೆ ಪಡೆಯುವುದು?

ಭಾರತ ಸರಕಾರದ ಆರ್ಥಿಕ ಸಚಿವಾಲಯದ ವೆಬ್ ಸೈಟ್ www.indiagovtmint.in ಎಂಬ ವೆಬ್ ಸೈಟ್ ನಲ್ಲಿ ಈ ನಾಣ್ಯವನ್ನಷ್ಟೇ ಅಲ್ಲ, ಹೀಗೆ ವಿಶೇಷ ಸಂದರ್ಭ ಬಿಡುಗಡೆಯಾದ ನಾಣ್ಯಗಳನ್ನು ಪಡೆಯಬಹುದು. ಇಲ್ಲಿ ನಿಮ್ಮ ಪಾನ್ ಸಂಖ್ಯೆ ದಾಖಲಿಸುವುದು ಕಡ್ಡಾಯ.

ಈ ವಿಶೇಷವಾದ ಹಾಗೂ ಚಲಾವಣೆಯಲ್ಲಿಲ್ಲದ ನಾಣ್ಯವನ್ನು ವಿಶೇಷ ಸಂದರ್ಭದಲ್ಲಿ ಸರಕಾರ ಬಿಡುಗಡೆ ಮಾಡುತ್ತದೆ. ಹೀಗಾಗಿಸಾಮಾನ್ಯ ಬ್ಯಾಂಕ್‌ಗಳಲ್ಲಿ ಲಭ್ಯವಿರುವುದಿಲ್ಲ. ಇದನ್ನು ಖರೀದಿಸಲು ನೀವು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು

www.indiagovtmint.in ವೆಬ್ ಸೈಟ್ ಗೆ ಹೋಗಿ “100 YEARS OF RASHTRIYA SWAYAMSEVAK SANGH -Denomination of ₹ 100 – Proof kappa box Packing”. ಎಂಬ ಸಂದೇಶವುಳ್ಳದ್ದಕ್ಕೆ ಕ್ಲಿಕ್ ಮಾಡಬೇಕು. ಹಾಗೂ ಅದರಲ್ಲಿರುವ ಸಂದೇಶಗಳನ್ನು ಓದಿ ಪೇಮೆಂಟ್ ಮಾಡಿದ ಬಳಿಕವಷ್ಟೇ ಕಾಯಿನ್ ನಿಮ್ಮ ಅಡ್ರೆಸ್ ಗೆ ಬರುತ್ತದೆ.ಈ ವೆಬ್ ಸೈಟ್ ಸ್ಕ್ರೋಲ್ ಮಾಡ್ತಾ ಹೋದಂತೆ browse coin by mints ಎಂದು ನೋಡಿದಾಗ ಹೈದರಾಬಾದ್, ಬಾಂಬೆ ಮತ್ತು ಕೋಲ್ಕತ್ತಾ ಮಿಂಟ್ ಎಂಬ ವಿಭಾಗ ಸಿಗುತ್ತದೆ. ಸದ್ಯ ಆರೆಸ್ಸೆಸ್ ಕಾಯಿನ್ ಬಾಂಬೆಮಿಂಟ್ ಮತ್ತು ಕೋಲ್ಕತ್ತಾ ಮಿಂಟ್ ನಲ್ಲಿ ಲಭ್ಯವಿದೆ.

ಎಷ್ಟು ಮೌಲ್ಯ: ಇದು 100 ರೂ ಕಾಯಿನ್ ಆದರೂ ಇದು ವಿಶೇಷವಾದ ಕಾರಣ ಇದರ ಮೌಲ್ಯ ಹೆಚ್ಚೇ ಆಗಿದೆ. ಪ್ರಸ್ತುತ ಇದರ ಮುಖಬೆಲೆ 11,605 ಆಗಿದೆ. ಭಾರತ ಮಾತೆಯ ಚಿತ್ರವುಳ್ಳ ವಿಶೇಷ ನಾಣ್ಯದಲ್ಲಿ ನಾಣ್ಯದ ಒಂದು ಬದಿಯಲ್ಲಿ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇನ್ನೊಂದು ಬದಿಯಲ್ಲಿ ಭಾರತ ಮಾತೆಯ ಚಿತ್ರವಿದೆ, ಜೊತೆಗೆ ಸಂಘದ ಧ್ಯೇಯ ವಾಕ್ಯವೂ ಇದೆ. ಈ ನಾಣ್ಯವು 44 ಮಿ.ಮೀ. ವ್ಯಾಸ ಮತ್ತು 40 ಗ್ರಾಂ ತೂಕವನ್ನು ಹೊಂದಿದೆ

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.