ವಾಹನಗಳನ್ನು ಮಕ್ಕಳ ಕೈಗೆ ಕೊಡುವವರ ಗಮನಕ್ಕೆ
ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಪ್ರಾಯದ ಬಾಲಕ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ ಬಗ್ಗೆ ಮಾನ್ಯ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದಲ್ಲಿ ವಿಚಾರಣೆ ಗೊಂಡು ಸೆ.26ರಂದು ಆರೋಪಿ ವಾಹನದ ಆರ್ ಸಿ ಮಾಲಕರಾದ ಮಹಮ್ಮದ್ ಅನೀಸ್ ಅವರಿಗೆ 32000 ರೂ, ದಂಡ ವಿಧಿಸಿರುವುದಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.