ಬಂಟ್ವಾಳ

ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ: ಮರಿಯಾಲದ ನೆನಪು- ಮಕ್ಕಳ ಸಮ್ಮಿಲನ

ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನಸಭಾ ಕ್ಷೇತ್ರದ 2025-27ರ ಸಾಲಿನ ಪಧ ಪ್ರದಾನ ಸಮಾರಂಭ ಮತ್ತು ಮರಿಯಾಲದ ನೆನಪು- ಮಕ್ಕಳ ಸಮ್ಮಿಲನ ಇತ್ತೀಚೆಗೆ ಬಂಟ್ವಾಳ ತಾಲೂಕು ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು.

ಜಾಹೀರಾತು

ಮಕ್ಕಳ ಸಮಾಗಮದೊಂದಿಗೆ ಮಕ್ಕಳ ವಿವಿಧ ವ್ಯಾಪಾರ ಅಂಗಡಿಗಳ ಮಕ್ಕಳ ಸಂತೆಯನ್ನು ಹಿರಿಯರಾದ ಮೋಹನ್ ಅರ್ಕಮೆ ಮತ್ತು ಭಾಸ್ಕರ್ ಕೊಲ್ನಾಡ್ ಉಧ್ಘಾಟಿಸಿದರು.

ನಂತರ ನಡೆದ ಒಕ್ಕೂಟದ ನೂತನ ಅಧ್ಯಕ್ಷರಾದ ಸುಮೀತ್ ಸಾಲಿಯಾನ್ ಸೊರ್ನಾಡ್ ಮತ್ತು ತಂಡದ ಪಧ ಗ್ರಹಣ ನೆರವೇರಿಸಿ ಶುಭ ಹಾರೈಸಿದರು. ನಂತರ ಕುಟುಂಬದಲ್ಲಿ ಮಕ್ಕಳ ಯಶಸ್ಸಿನಲ್ಲಿ ತಾಯಂದಿರ ಪಾತ್ರದ ಬಗ್ಗೆ ಕಾರ್ಕಳ ಸಾಣೂರು ರಾಜೇಶ್ವರಿ ಪಿ.ಯು.ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ರಶ್ಮಿ ರಾಜೇಶ್ ಉಪನ್ಯಾಸ ನೀಡಿದರು.

ಮಧ್ಯಾಹ್ನ ನಡೆದ ಮರಿಯಾಲದ ನೆನಪು ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸೌಂದರ್ಯ ರಮೇಶ್ ಉದ್ಘಾಟಿಸಿ ಮಾತನಾಡಿ ಚದುರಿ ಹೋಗಿರುವ ಕುಲಾಲರು ಮೂಲ್ಯರು ಕುಂಭಾರರು ಈ ಸಂಘಟನೆಯ ಮೂಲಕ ಇಂದು ಒಂದಾಗುವ ಕಾಲ ಸನ್ನಿಹಿತವಾಗುತ್ತಿದೆ, ಇಂದು ಕುಲಾಲರು ಸದೃಡವಾಗಿದ್ದಾರೆ ಒಗ್ಗಟ್ಟನ್ನು ಪ್ರದರ್ಶಿಸಿಸುವ ಮೂಲಕ ಅವಕಾಶವನ್ನು ಪಡೆಯುತ್ತಿದ್ದಾರೆ ಯುವ ವೇದಿಕೆ ಇಂತಹ ಕಾರ್ಯಕ್ರಮಗಳ ಮೂಲಕ ಸಮುದಾಯವನ್ನು ಆಕರ್ಷಿಸಬೇಕು ಎಂದರು.

ಮುಖ್ಯ ಅತಿಥಿಗಳಾದ ಮೆಸ್ಕಾಂ ನ ಹಿರಿಯ ನಿವೃತ್ತ ಅಧಿಕಾರಿ ಮಂಜಪ್ಪ ಎಂ.ಡಿ ಸಮುದಾಯವನ್ನು ಪ್ರೇರೆಪಿಸುವ ಇಂತಹ ಕಾರ್ಯಕ್ರಮಗಳಿಗೆ ಬಂಟ್ವಾಳ ಎಂದಿಗೂ ಮುಂದು ಜನರನ್ನು ಸೆಳೆಯುವ ಜತೆಗೆ ಸಂಘಟನೆ ಬಲಿಷ್ಟವಾಗುವುದು ಎಂದರು.

ಅತಿಥಿಗಳಾಗಿ ಮಡಿಕೇರಿ ಉಪ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ನಾರಾಯಣ ಮೂಲ್ಯ, ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಮೂಲ್ಯ ಅನಿಲಡೆ, ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಗಿರೀಶ್ ಕುಲಾಲ್ ವೇಣೂರು, H.D.F.C ಬ್ಯಾಂಕ್ ಬಂಟ್ವಾಳ ಶಾಖೆಯ ಪ್ರಬಂಧಕರು ಪ್ರಶಾಂತ್ ಕುಮಾರ್, ಪುತ್ತೂರು ಕವಿದಿನ್ ಮೆಲೋಡಿಸ್‌ನ ಗಾಯಕಿ ಕವಿತಾ ದಿನಕರ್, ಬರಹಗಾರರು, ಯಕ್ಷ ಕಲಾವಿದ ಮಹೇಶ್ ಕುಲಾಲ್ ಅರ್ತಿಮೂಲೆ, ಬಂಟ್ವಾಳ ಕುಲಾಲ ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಒಕ್ಕೂಟದ ರಾಜ್ಯಾಧ್ಯಕ್ಷರು ಸುಧಾಕರ ಸಾಲಿಯಾನ್, ಜಿಲ್ಲಾ ಪ್ರ.ಕಾರ್ಯದರ್ಶಿ ನವೀನ್ ಮಜಲು, ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ 2025-27 ರ ಸಾಲಿನ ಸರ್ವಜ್ಞ ಪ್ರಶಸ್ತಿಯನ್ನು ಧಾರ್ಮಿಕ ರಂಗದಲ್ಲಿ ಉಮೇಶ್ ಸಾಯ ಬೇಡಗುಡ್ಡೆ, ಪ್ರಸೂತಿ ತಜ್ಙೆ ರಾಧಾ ಕಾಮಾಜೆ, ನಿವೃತ್ತ ಶಿಕ್ಷಕಿ ಜಯಂತಿ ಗಂಗಾಧರ್ ಗಾಣದಪಡ್ಪು, ಉಧ್ಯಮಿ ಗಂಗಾಧರ್ ಶೇರಾ, ಪೈಂಟಿಗ್ ಕಲಾವಿದ ಸುಮಂತ್ ಆರ್ಟ್ಸ್‌ನ ವಿಜಯ್.ಕೆ ಇವರಿಗೆ ಪ್ರಧಾನ ಮಾಡಲಾಯಿತು,

ಮಣ್ಣಿನ ಜತೆ ಮಕ್ಕಳೊಂದಿಗೆ ಹಿರಿಯರು ರಾಜ್ಯ ಮಟ್ಟದ ಪೊಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವೇದಿಕೆಯ ಸದಸ್ಯರ ಸಾಧಕ ಮಕ್ಕಳಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ಸುಮೀತ್ ಸಾಲ್ಯಾನ್ ಸೊರ್ನಾಡ್ ವಹಿಸಿದ್ದರು,

ಕೋಶಾಧಿಕಾರಿ ಸಂತೋಷ್ ಮಯ್ಯರಬೈಲು, ಮಾಜಿ ಗೌರವಧ್ಯಕ್ಷ ನಾರಾಯಣ ಹೊಸ್ಮಾರು, ಮಾಜಿ ಕಾರ್ಯದರ್ಶಿ ಪುನೀತ್ ಕಾಮಾಜೆ, ಮಾಜಿ ಮಹಿಳಾ ಸಂಚಾಲಕಿ ವಿಜಯಶ್ರೀ ಪುರುಷೋತ್ತಮ್, ಸಂಚಾಲಕಿ ದುರ್ಗಾಶ್ರೀ ಭಂಡಾರಿಬೆಟ್ಟು ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಜಯಗಣೇಶ್ ಬಂಗೇರ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ನಿತೇಶ್ ಪಲ್ಲಿಕಂಡ ವಂದಿಸಿದರು, ಗೌರವಾಧ್ತಕ್ಷ ಎಚ್ಕೆ ನಯನಾಡು ನಿರೂಪಿಸಿದರು.
ಗಮನ ಸೆಳೆದ ಮಕ್ಕಳ ಸಂತೆ:
ಪೊಸಳ್ಳಿ ಕುಲಾಲ ಭವನದ ಹೊರಾಂಗಣ ಮಕ್ಕಳ ಸಂತೆಯಿಂದ ಹೊಸ ಲೋಕವನ್ನೇ ತೆರೆದಿಟ್ಟಿತ್ತು. ಹತ್ತಕ್ಕೂ ಮಿಕ್ಕಿ ಅಂಗಡಿ ಮಳಿಗೆಗಳಲ್ಲಿ ಮಕ್ಕಳು ಒಂದು ದಿನದ ಮಟ್ಟಿಗೆ ಅಂಗಡಿ ಮಾಲಕರಾದರು, ವ್ಯಾಪಾರಿಗಳಾದರು ಮನೆ ದಿನಸಿ, ತರಕಾರಿ, ಒಣ ಮೀನು ವ್ಯಾಪಾರ, ಐಸ್ ಕ್ರೀಮ್, ಕಲ್ಪರಸ, ಪ್ಯಾನ್ಸಿ ಅಂಗಡಿ, ಪಿನಾಯಿಲ್ ಅಂಗಡಿ ಇತ್ಯಾದಿ ಮಳಿಗೆಗಳನ್ನು ನಿರ್ಮಿಸಿ ವ್ಯವಹಾರ ನಿರ್ವಹಿಸಿ ಹಿರಿಯರಿಂದ ಮಾರ್ಗದರ್ಶನ ಪಡೆದು ವ್ಯವಹಾರದ ಜ್ಙಾನ ಹಣಕಾಸಿನ ಜಾಣ್ಮೆಯನ್ನು ಪಡೆಯುವ ಮೂಲಕ ವಿಭಿನ್ನ ಪ್ರಯೋಗ ಮಾಡಲಾಯಿತು. ಗ್ರಾಹಕರೂ ಉತ್ತಮವಾಗಿ ಸ್ಪಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.