ಪ್ರಮುಖ ಸುದ್ದಿಗಳು

ಅರಿವು ತರಬೇತಿ ಕೇಂದ್ರದಿಂದ ವಿಶೇಷ ಮಕ್ಕಳ ಹೆತ್ತವರು, ಶಿಕ್ಷಕರಿಗೆ ಪ್ರಾಥಮಿಕ ಚಿಕಿತ್ಸೆ, ಜೀವರಕ್ಷಣಾ ತರಬೇತಿ

ಶಕ್ತಿನಗರದಲ್ಲಿರುವ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಮಂಗಳೂರು ಹಾಗೂ ಲಯನ್ಸ್ ನೇತ್ರಾವತಿ ಸಹಯೋಗದಲ್ಲಿ ವಿಶೇಷ ಮಕ್ಕಳ ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಜೀವ ರಕ್ಷಣಾ ತರಬೇತಿ ನಡೆಯಿತು.

ಜಾಹೀರಾತು

ಮಂಗಳೂರಿನ ಐಎಂಎ ಭವನದಲ್ಲಿ ನಡೆದ ಕಾರ್ಯಗಾರವನ್ನು ಐಎಂಎ ಅಧ್ಯಕ್ಷರಾದ ಡಾ. ಜೆಸ್ಸಿ ಮರಿಯಾ ಡಿಸೋಜಾ ಉದ್ಘಾಟಿಸಿ ಮಾತನಾಡಿ ಈ ತರಬೇತಿ ವಿಶೇಷ ಮಕ್ಕಳ ಪೋಷಕರಲ್ಲಿ ಅರಿವು ಹೆಚ್ಚಿಸಲು ಸಹಾಯಕಾರಿಯಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಅರವಿಂದ ಕುಡ್ಪಿ ಮಾತನಾಡಿ ಜೀವ ರಕ್ಷಣಾ ತರಬೇತಿ ಆಪತ್ಕಾಲದಲ್ಲಿ ಜೀವವನ್ನು ಉಳಿಸಲು ಸಹಾಯ ಆಗುತ್ತದೆ ಎಂದರು. ಅರಿವು ವಿಶೇಷ ಮಕ್ಕಳ ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಭಟ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು.

ಅರಿವು ಟ್ರಸ್ಟ್ ಅಧ್ಯಕ್ಷರಾದ ಡಾ. ಸುಂದರ ಭಟ್ ಮಾತನಾಡಿ ವಿಶೇಷ ಮಕ್ಕಳ ಹೆತ್ತವರಿಗೆ ಮಾರ್ಗದರ್ಶನ ನೀಡಿ ಮುಖ್ಯವಾಹಿನಿಗೆ ತರುವುದು ಅರಿವು ಸಂಸ್ಥೆಯ ಉದ್ದೇಶ ಎಂದರು. ಲಯನ್ಸ್ ಕ್ಯಾಬಿನೆಟ್ ಖಚಾoಚಿ ಬಾಲಕೃಷ್ಣ ಹೆಗ್ಡೆ, ಗಾಯತ್ರಿ ಅರವಿಂದ ರಾವ್, ಲಯನ್ಸ್ ನೇತ್ರವತಿ ಕ್ಲಬ್ ಅಧ್ಯಕ್ಷೆ ವಿನಯ ರಾವ್, ಡಿಸ್ಟ್ರಿಕ್ಟ್ ಅಪ್ಲಿಫ್ಟ್ ಆಫೀಸರ್ ಚಂದ್ರಕಲಾ ರಾವ್ ಅನುಭವ ಹಂಚಿ ಕೊಂಡರು. ಅರಿವು ಟ್ರಸ್ಟ್ ಖಚಾoಚಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ತರಬೇತಿಗೆ ಬೇಕಾದ ಪರಿಕರಗಳನ್ನು ಫಾ. ಮುಲ್ಲರ್ ಸಿಮುಲೇಷನ್ ಲ್ಯಾಬ್ ಒದಗಿಸಿ ಸಹಕರಿಸಿದರು. ಜೀವ ರಕ್ಷಣಾ ತರಬೇತಿಯನ್ನು ಡಾ, ಸುಧೀರ್ ಪ್ರಭು ನೇತೃತ್ವದಲ್ಲಿ ಡಾ. ಅರ್ಚನಾ ಭಟ್, ಡಾ. ಡೇನ್ ಚಾಂಡಿ, ಡಾ. ಪ್ರಗದೀಶ್ ರಾಜು ನಡೆಸಿಕೊಟ್ಟರು.ಅರಿವು ಸಂಸ್ಥೆಯ ಸಿಬ್ಬಂದಿ ನಯನ ಮೇಸ್ಟ ಕಾರ್ಯಕ್ರಮ ನಿರೂಪಿಸಿದರು. ತಿಲೋತ್ತಮ ಸ್ವಾಗತಿಸಿದರು,  ಸಹನಾ ವಂದನಾರ್ಪಣೆ ಮಾಡಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.