ಬಂಟ್ವಾಳ: ರಾಜ್ಯದ ಜಿಲ್ಲೆ, ತಾಲೂಕುಗಳ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಗಳಲ್ಲಿ ಅರೆಕಾಲಿಕ ಸ್ವಯಂಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಯ ಸ್ಕೀಮ್ ಫಾರ್ ದಿ ಪಾರಾಲೀಗಲ್ ವಾಲಂಟಿಯರ್ಸ್ ರಿವೈಸ್ಡ್ ಆಂಡ್ ಮೊಡ್ಯೂಲ್ ಫಾರ್ ದಿ ಓರಿಯೆಂಟೇಶನ್ ಇಂಡಕ್ಷನ್ ರೆಫ್ರೆಶರ್ಸ್ ಕೋರ್ಸ್ ಫಾರ್ ಪಿ.ಎಲ್.ವಿ. ಟ್ರೈನಿಂಗ್ ರಂತೆ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಸಂಪರ್ಕಿಸುವುದು ಎಂದು ಪ್ರಕಟಣೆ ತಿಳಿಸಿದೆ.
ಶಿಕ್ಷಕರು/ ನಿವೃತ್ತ ಶಿಕ್ಷಕರು, ಮಾಜಿ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರು, ಸಮಾಜ ಕಾರ್ಯಕರ್ತರು, ಮಹಿಳೆಯರು, ಲಿಂಗಪರಿವರ್ತಿತರು, ಬುಡಕಟ್ಟು ಸಮುದಾಯಗಳ ವ್ಯಕ್ತಿಗಳು, ಸಮಾಜದ ಅಂಚಿನಲ್ಲಿರುವ ವರ್ಗಗಳು ಮತ್ತು ಇತರ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು, ಎಂಎಸ್ ಡಬ್ಲ್ಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪದವಿ ಪೂರ್ವ ಅಥವಾ ಪದವಿ ವಿದ್ಯಾರ್ಥಿಗಳು, ಕಾನೂನು ಪದವಿ ವಿದ್ಯಾರ್ಥಿಗಳು, ಸಮಾಜ ಸೇವೆಯಲ್ಲಿ ತೊಡಗಿರುವ ರಾಜಕಿಯೇತರ ಸಂಘ ಸಂಸ್ಥೆಗಳ ಸದಸ್ಯರು, ಸರ್ಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಮಹಿಳಾ ನೆರೆಹೊರೆ ಗುಂಪುಗಳು, ಮೈತ್ರಿ ಸಂಘಗಳು ಮತ್ತು ಅಂಚಿನಲ್ಲಿರುವ/ ದುರ್ಬಲ ಗುಂಪುಗಳು ಸೇರಿದಂತೆ ಇತರ ಸ್ವಸಹಾಯ ಗುಂಪುಗಳ ಸದಸ್ಯರು, ವಿದ್ಯಾವಂತ ಮತ್ತು ಉತ್ತಮ ನಡತೆಯುಳ್ಳ ಖೈದಿಗಳು, ಮೃತರಕ್ಷಣಾ ಸಿಬ್ಬಂದಿಯ ವಿಧವೆಯರು, ನಾಗರಿಕ ಪ್ರದೇಶಗಳಲ್ಲಿ ವಾಸಿಸುವ ಮಾಜಿ ಸೈನಿಕರು ಅಥವಾ ಅವರ ಅವಲಂಬಿತರು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ರಕ್ಷಣಾ ಸಿಬ್ಬಂದಿಯ ಸಂಗಾತಿಗಳು ಅಥವಾ ವಯಸ್ಕ ಮಕ್ಕಳು ಅರೆಕಾಲಿಕ ಕಾನೂನು ಸ್ವಯಂ ಸೇವಕ ರಾಗಲು ಅರ್ಹತೆಯನ್ನು ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.