?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಕೇವಲ 500 ಮೀಟರ್ ದೂರ.
ಬಿ.ಸಿ.ರೋಡ್ ನಲ್ಲಿರುವ ತಾಲೂಕು ಆಡಳಿತ ಸೌಧದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿವರೆಗೆ ಬಿರುಸಾಗಿ ನಡೆದರೆ ಐದು ನಿಮಿಷವೂ ಬೇಡ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಸುಸಜ್ಜಿತವಾಗಿ ನಿರ್ಮಾಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ಸಿಗುತ್ತದೆ. ಬಿ.ಸಿ.ರೋಡ್ ಪೇಟೆಯಿಂದ ಕಾಲ್ನಡಿಗೆಯಲ್ಲಿ ಸಾಗಲು ಅನುಕೂಲವಾಗುವ ರಸ್ತೆ ಹದಗೆಟ್ಟಿದೆ.
road
ಸುಮಾರು 11 ವರ್ಷಗಳ ಮೊದಲು ಈ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು. ಆದರೆ ಕಾಮಗಾರಿ ಸಂಪೂರ್ಣ ಆಗಲೇ ಇಲ್ಲ. ಅದನ್ನು ಜ್ಞಾಪಿಸುವಂತೆ ಕಿತ್ತುಹೋದ ರಸ್ತೆ ಎದ್ದು ಕಾಣಿಸುತ್ತದೆ.
ಬಿ.ಸಿ.ರೋಡ್ ಭೂ ಅಭಿವೃದ್ಧಿ ಬ್ಯಾಂಕ್ ನಿಂದ ತೋಟಗಾರಿಕಾ ಇಲಾಖೆ ಕಚೇರಿಯವರೆಗೆ ರಸ್ತೆ ಅಗಲಗೊಂಡು ಸಂಪೂರ್ಣ ಕಾಂಕ್ರೀಟ್ ನೊಂದಿಗೆ ಒಂದು ಭಾಗದಲ್ಲಿ ಫುಟ್ ಪಾತ್ ನಿರ್ಮಾಣವಾಗಿ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಸಾಗಿದರೆ, ರಸ್ತೆ ಇದೆಯೇ ಎಂಬ ಪ್ರಶ್ನೆ ಕಾಡುತ್ತದೆ. ರಸ್ತೆ ತುಂಬಾ ವಾಹನಗಳು ಅಲ್ಲಲ್ಲಿ ನಿಂದು ನಡೆದಾಡಲೂ ಸಮಸ್ಯೆಯಾಗುವುದು ಹಾಗೂ ಹಾಳಾದ ರಸ್ತೆಯಲ್ಲಿ ಹೊಂಡಗಳು ಒಂದು ಮುಚ್ಚಿದರೆ, ಇನ್ನೊಂದು ಪ್ರತ್ಯಕ್ಷವಾಗುವುದು ಒಂದು ಸಮಸ್ಯೆಯಾದರೆ, ಬಿಇಒ ಕಚೇರಿಯಂದ ಕೈಕುಂಜ ಪಶ್ಚಿಮ ಬಡಾವಣೆ ಹಾಗು ಪೂರ್ವ ಬಡಾವಣೆಗೆ ಕವಲೊಡೆಯುವ ಜಾಗದವರೆಗೆ ಹಾಳಾಗಿ ಹೋಗಿದ್ದು, ತೇಪೆ ಹಾಕುವುದಷ್ಟೇ ಅಲ್ಲ, ಸಂಪೂರ್ಣ ದುರಸ್ತಿಯಾದರಷ್ಟೇ ಸಂಚಾರಯೋಗ್ಯವಾಗಲು ಸಾಧ್ಯ ಎಂಬಂತಾಗಿದೆ.
ತೋಟಗಾರಿಕಾ ಇಲಾಖೆ, ಎಪಿಎಂಸಿ, ಕನ್ನಡ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಮೆಸ್ಕಾಂ ವಿಭಾಗೀಯ ಕಚೇರಿ, ಕೋರ್ಟ್, ಅಲ್ಲದೆ, ದ್ವಿಚಕ್ರ, ನಾಲ್ಕು ಚಕ್ರಗಳ ವಾಹನ ರಿಪೇರಿ ಮಾಡುವ ಗ್ಯಾರೇಜುಗಳು, ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿ ಕೈಕುಂಜೆಯ ಭಾಗದಲ್ಲಿ ನೂರಾರು ಮನೆಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ. ಹೀಗಾಗಿ ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಬಳಸುತ್ತಾರೆ.