ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ವಠಾರದಲ್ಲಿ ವೈಭವದ ಶಾರದೋತ್ಸವ ಸೆ.29ರಂದು ಆರಂಭಗೊಂಡಿದ್ದು, ಅ.3ರವರೆಗೆ ನಡೆಯಲಿದೆ.ಸೆ.28ರಂದು ರಾತ್ರಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ಹನುಮಂತ ದೇವಸ್ಥಾನ, ಬಡ್ಡಕಟ್ಟೆಯಿಂದ ತಂದು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸ್ಥಾಪನೆ ಮಾಡಲಾಯಿತು. ಸೆ.29ರಂದು ಪ್ರತಿಷ್ಠಾಪನೆ ನಡೆಸಲಾಯಿತು.
ಅ.2ರವರೆಗೆ ವಿವಿಧ ಆಹ್ವಾನಿತ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯುತ್ತಿದೆ. ಅ.1ರಂದು ಬುಧವಾರ ಮಧ್ಯಾಹ್ನ 1ಕ್ಕೆ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು,
ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ಶಾರದಾ ಪೂಜಾ ಮಹೋತ್ಸವದ ಅನ್ನಸಂತರ್ಪಣೆ ಸೇವೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರು ಭಾಗವಹಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕುಟುಂಬ ಸಮೇತರಾಗಿ ಆಗಮಿಸಿ, ದೇವರ ದರ್ಶನ ಪಡೆದರು.
ಅ.2ರಂದು ಗುರುವಾರ ರಾತ್ರಿ 7.30ಕ್ಕೆ ವಿಶೇಷ ದುರ್ಗಾ ಪೂಜೆ, ಅ.3ರಂದು ಶುಕ್ರವಾರ ರಾತ್ರಿ 10ಕ್ಕೆ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ನಡೆಯುತ್ತದೆ. ಈ ಸಂದರ್ಭ ಆಗಮಿಸುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ಪಾಣೆಮಂಗಳೂರು ಕಲ್ಲಡ್ಕ ಮಂಗಳೂರು ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದ್ವಿಚಕ್ರವಾಹನ ಸವಾರರು ಶ್ರೀ ದೇವಳದ ಸಮೀಪ ಇರುವ ಎಸ್ ವಿ ಎಸ್ ದೇವಳದ ವಿದ್ಯಾಸಂಸ್ಥೆಯ ವಠಾರದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ ಮೂಡುಬಿದಿರೆ ಸಿದ್ಧಕಟ್ಟೆ ಬೈಪಾಸ್ ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಬರುವ ದಾರಿಯಲ್ಲಿ ಕೊಟ್ರಮನಗಂಡಿಯ ದೇವರ ಕಟ್ಟೆಯ ಬಸ್ ನಿಲ್ದಾಣದ ಎದುರು ಇರುವ ವಿಶಾಲ ಮೈದಾನದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ
ಪುಂಜಾಲ್ ಕಟ್ಟೆ, ಗುರುವಾಯನಕೆರೆ, ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಸರಸ್ವತಿ ನರ್ಸಿಂಗ್ ಹೋಮ್ ಇದರ ಮುಂದೆ ಇರುವ ವಿಶಾಲ ಮೈದಾನ ದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ
ಶೋಭಾಯಾತ್ರೆ ಸಂದರ್ಭ, ಶುಕ್ರವಾರದಂದು ಬಂಟ್ವಾಳ ಪೋಸ್ಟ್ ಆಫೀಸ್‌ನಿಂದ ಪೂರ್ಣಿಮಾ ಸ್ಟೋರ್ ಹಾಗೂ ಬೈಪಾಸ್ ರಸ್ತೆಯ ವರೆಗೆ ರಸ್ತೆಯ 2 ಬದಿಯಲ್ಲಿ ವಾಹನವನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ ಎಂದು ದೇವಳ ಪ್ರಕಟಣೆ ತಿಳಿಸಿದೆ.