ಬಂಟ್ವಾಳ: 2025-26 ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಕೆಗೆ ಎಲ್ಲಾ ವರ್ಗದ ರೈತರಿಗೆ ಶೇಕಡಾ 90 ರ ಸಹಾಯಧನ ಲಭ್ಯವಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಹೊಸದಾಗಿ ನಿರ್ಮಿಸಿರುವ ತೋಟಗಳಿಗೆ, ಹನಿ/ತುಂತುರು ನೀರಾವರಿ ಇಲ್ಲದ ಹಳೆ ತೋಟಗಳಿಗೆ, ಒಂದು ವೇಳೆ ಈಗಾಗಲೇ ಈ ಯೋಜನೆಯಡಿ ಸೌಲಬ್ಯ ಪಡೆದು ಏಳು ವರ್ಷ ಕಳೆದಿದ್ದಲ್ಲಿ ಅಥವಾ ಈ ಹಿಂದೆ ರೈತರೇ ಸ್ವತಃ ಮಾಡಿದ ತುಂತುರು/ಹನಿ ನೀರಾವರಿ ಹಳೆಯದಾಗಿದ್ದು ಹೊಸದಾಗಿ ಮತ್ತೆ ಹನಿ ನೀರಾವರಿ/ತುಂತುರು ಅಳವಡಿಸಲು ಸಹಾಯಧನ ಪಡೆಯಲು ಅವಕಾಶವಿದೆ. ಬೆಳೆಯ ಅಂತರಕ್ಕೆ ಅನುಗುಣವಾಗಿ ಸಹಾಯಧನ ನೀಡಲಾಗುವುದು. (ಉದಾ: ಅಡಿಕೆ ಬೆಳೆಗೆ ಹನಿನೀರಾವರಿ ಅಳವಡಿಕೆಗೆ ಪ್ರತೀ ಹೆಕ್ಟೇರಿಗೆ ಗರಿಷ್ಠ ಅಂದಾಜು ರೂ 42900.00, ತುಂತುರು ನೀರಾವರಿ ಅಳವಡಿಕೆಗೆ ಪ್ರತೀ ಹೆಕ್ಟೇರಿಗೆ ಗರಿಷ್ಠ ಅಂದಾಜು ರೂ 36000.00 ಸಹಾಯಧನ ). ಆಸಕ್ತ ರೈತರು ತಮ್ಮ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ನೊಂದಿಗೆ ತೋಟಗಾರಿಕೆ ಇಲಾಖೆ (ಜಿ.ಪಂ) ಬಂಟ್ವಾಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ ಸಂಪರ್ಕ ಸಂಖ್ಯೆ: ದಿನೇಶ್, ಸಹಾಯಕ ತೋಟಗಾರಿಕೆ ಅಧಿಕಾರಿ:9986199283, ಹಾಗೂ ಹರೀಶ:9036893214. ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.