ಪ್ರಮುಖ ಸುದ್ದಿಗಳು

ಆಲ್ ದಿ ಬೆಸ್ಟ್ ಖ್ಯಾತಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ರಂಗಭೂಮಿ ನಟ, ನಿರ್ದೇಶಕ, ಚಲನಚಿತ್ರ ಕಲಾವಿದ ಹುಬ್ಬಳ್ಳಿ ಮೂಲದ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಜಾಹೀರಾತು

ಯಶವಂತ ಸರದೇಶಪಾಂಡೆ ಅವರಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಅವರನ್ನು ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಯಿತು. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅವರು ಪಾತ್ರವಹಿಸುತ್ತಿದ್ದರು. ‘ರಾಮ ಶ್ಯಾಮ ಭಾಮ’ ಕನ್ನಡ ಚಲನಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆ

ಕೊಳಲು ನಾಟಕದಲ್ಲಿ ಅಭಿನಯಿಸಬೇಕಿತ್ತು!!!

ಯಶವಂತ ಸರದೇಶಪಾಂಡೆ ಅವರು ನಿನ್ನೆ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಇದು.

ನಿನ್ನೆಯ ಅನೌನ್ಸ್ಮೆಂಟನ ಮುಂದಿನ ಭಾಗ ಇದು… ಖ್ಯಾತ ಕೊಳಲು ಕಲಾವಿದ ಸೂರಮಣಿ ಪಂಡಿತ ಡಾ ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು.com(edy)’ ಎಂಬ ಹೊಸ ನಾಟಕದ  ಪ್ರದರ್ಶನ… ನಿರ್ದೇಶನ ಅವರದs, ಮತ್ತ ರಂಗದ ಮ್ಯಾಲೆ ಪ್ರಮುಖ ಪಾತ್ರದಾಗ ಕಾಣಿಸಿಗೋತಾರ… ಕಲೆಯ ಬಗ್ಗೆ ಅಪಾರ ಕಾಳಜಿ ಇಟಗೊಂಡಿರೋ, ಏನ್ ಮಾಡಿದರೂ ಭಾಳ ಶಿಸ್ತಿನಿಂದ ನಿರ್ವಹಿಸುವ ಮತ್ತ ಕ್ರಿಯಾಶೀಲರಾಗಿ ಪ್ರಸ್ತುತಿ ಮಾಡುವ ಡಾ ಪ್ರವೀಣ್ ಗೊಡಖಿ೦ಡಿಯವರ ಜೋಡಿ ರಂಗದ ಮ್ಯಾಲೆ ನಾನೂ ಅಭಿನಯ ಮಾಡತೇನಿ…

ನಿವ್ವಳ ನಗು ಮತ್ತ ಸಂಗೀತದ ಹೊಳಹನ್ನು ರಂಗದ ಮ್ಯಾಲೆ ಸಾಕಾರ ಆಗತಿರೋ ಈ ರಂಗಪ್ರಯೋಗ ನಿಮಗೆಲ್ಲ ಆನಂದದ ಔತಣ ನೀಡತದ, ಸಂಶಯ ಇಲ್ಲ !!

ಪ್ರದರ್ಶನ ದಿನಾಂಕ : 18/10/2025, ಶನಿವಾರ ಸಂಜಿ 6:30, ಬೆಂಗಳೂರಿನ ಏನ್ ಅರ ಕಾಲೋನಿ ಸ್ಥಿತ ಡಾ ಸಿ ಅಶ್ವಥ್ ಕಲಾಮಂದಿರದಾಗ !! ಪ್ರವೇಶ ಪಾತ್ರಗಳು ಬುಕ್ ಮೈ ಷೋ ದಾಗ ಲಭ್ಯ !! ಬರಬೇಕರೀ ಎಲ್ಲಾರೂ…

ರಾಜ್ಯದ ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ್ಮ ಹುಬ್ಬಳ್ಳಿಯ ಶ್ರೀ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ವರ್ಗಕ್ಕೆ , ನಾಟಕ ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ — PRALHAD JOSHI, UNION MINISTER
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.