ಬಂಟ್ವಾಳ

ಅಕ್ಟೋಬರ್ 5ರಂದು ಸಮಾಜ ಸೇವಾ ಸಹಕಾರಿ ಸಂಘದ 17ನೇ ಶಾಖೆ ಉದ್ಘಾಟನೆ, ವರದಿ-ವಿಡಿಯೋ ಇಲ್ಲಿದೆ

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ 17ನೇ ಆಲಂಕಾರು ಶಾಖೆಯ ಉದ್ಘಾಟನಾ ಸಮಾರಂಭ ಭಾನುವಾರ ಅಕ್ಟೋಬರ್ 5ರಂದು ಆಲಂಕಾರು ಮಾತಾ ಕೃಪಾ ಕಟ್ಟಡದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದ್ದಾರೆ.

ಅಧ್ಯಕ್ಷ ಸುರೇಶ್ ಕುಲಾಲ್ ಅವರು ಮಾಹಿತಿ ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೆಳಗ್ಗೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಪ್ರಜ್ವಲನಗೈದು ಆಶೀರ್ವಚನ ನೀಡುವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಶಾಖೆ ಉದ್ಘಾಟಿಸುವರು. ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಭದ್ರತಾ ಕೊಠಡಿ ಉದ್ಘಾಟಿಸುವರು. ಸೇಫ್ ಲಾಕರ್ ಅನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಗಣಕಯಂತ್ರವನ್ನು ಕುಲಾಲ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಉದ್ಘಾಟಿಸುವರು. ಠೇವಣಿ ಪತ್ರವನ್ನು ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ಬಿಡುಗಡೆಗೊಳಿಸುವರು. ಅಧ್ಯಕ್ಷತೆಯನ್ನು ಅಧ್ಯಕ್ಷ ಸುರೇಶ್ ಕುಲಾಲ್ ವಹಿಸುವರು ಎಂದರು.

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ನಿರ್ದೇಶಕರಾದ ರಮೇಶ್ ಸಾಲ್ಯಾನ್, ಬಿ.ರಮೇಶ್ ಸಾಲ್ಯಾನ್, ಸುರೇಶ್ ಕುಲಾಲ್ ಎನ್, ಭೋಜ ಸಾಲಿಯಾನ್, ಕಿರಣ್ ಕುಮಾರ್ ಎ, ಪ್ರೇಮನಾಥ ಬಂಟ್ವಾಳ್, ಜಗನ್ನಿವಾಸ ಗೌಡ, ಗಣೇಸ್ ಸಮಗಾರ, ರೇಖಾ ನಾಯಕ್ ಉಪಸ್ಥಿತರಿದ್ದರು. ಬ್ಯಾಂಕ್ ಕುರಿತು ಮಾಹಿತಿ ನೀಡಿದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, 1981ರಲ್ಲಿ ಸ್ವಾತಂತ್ರ್ಯಯೋಧ ಹಾಗೂ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ನೇತ್ರತ್ವದಲ್ಲಿ ಹಾಗೂ ಸಹಕಾರಿ ಧುರೀಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಸ್ಥಾಪನೆಯಾಗಿರುವ ಬ್ಯಾಂಕಿನ ಉದ್ಘಾಟನೆ ಸಮಾರಂಭದಲ್ಲಿ ಆಗಿನ ಕರ್ನಾಟಕ ಸರಕಾರದ  ಆಗಿನ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರಾದ ಯಂ. ವೀರಪ್ಪ ಮೊಯಿಲಿಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ಭಾಸ್ಕರ ಶೆಟ್ಟಿ, ಲೋಕಸಭಾ ಸದಸ್ಯ ಬಿ. ಜನಾರ್ಧನ ಪೂಜಾರಿ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರಾಗಿದ್ದ  ಇಬ್ರಾಹಿಂ, ವಿಧಾನಸಭಾ ಸದಸ್ಯ ಬಿ ಎ ಮೊಯಿದಿನ್, ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷ  ಕೆ. ಮಹಾಬಲ ಶೆಟ್ಟಿ, ಭಾಗವಹಿಸಿದ್ದರು,  ಆಗ ೧೩೧ ಸದಸ್ಯರಿಂದ ರೂ. ೨೨,೬೨೦ ಪಾಲು ಬಂಡವಾಳದೊಂದಿಗೆ ಬ್ಯಾಂಕ್ ತನ್ನ ಕಾರ್ಯಾರಂಭವನ್ನು ಮಾಡಿತ್ತು ಎಂದರು.

ಇದೀಗ ಬಂಟ್ವಾಳ ಬೈಪಾಸ್ ಜಂಕ್ಷನಿನಲ್ಲಿ ಸಹಕಾರಿಯು ತನ್ನ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು ತನ್ನ 16 ಶಾಖೆಗಳಾದ ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬ್ಯೆಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ. ಸಿ. ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ, ಉಪ್ಪಿನಂಗಡಿ ಮತ್ತು ತೊಕ್ಕೊಟ್ಟು-ದೇರಳಕಟ್ಟೆ ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿರುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ದಿವಾಕರ ಮೂಲ್ಯ, ಅಧ್ಯಕ್ಷರು, ಕುಲಾಲ ಸಂಘ (ರಿ.) ಬೆಂಗಳೂರು, ಸುಶೀಲ ಅಧ್ಯಕ್ಷರು, ಆಲಂಕಾರು ಗ್ರಾಮ ಪಂಚಾಯತ್, ರಮೇಶ್ ಭಟ್ ಯು. ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಲಂಕಾರು, ಪೂವಪ್ಪ ನಾಯ್ಕ ಎಸ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಲ್ಯಾಂಪ್ಸ್ ಸಹಕಾರ ಸಂಘ ನಿ. ಪುತ್ತೂರು, ಮಹೇಶ್ ಸವಣೂರು, ಕೋಶಾಧಿಕಾರಿ, ವಕೀಲರ ಸಂಘ, ಪುತ್ತೂರು, ಪೀರ್ ಮೊಹಮ್ಮದ್ ಸಾಹೇಬ್, ಅಧ್ಯಕ್ಷರು, ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ, ರವಿ ಪೂಜಾರಿ ಉಪಾಧ್ಯಕ್ಷರು, ಆಲಂಕಾರು ಗ್ರಾಮ ಪಂಚಾಯತ್, ಸುಜಾತ ಕೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಲಂಕಾರು, ಡಾ| ಕೃತಿ ಶೆಟ್ಟಿ, , ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ, ಆಲಂಕಾರು, ಕುಶಾಲಪ್ಪ ಗೌಡ, ಶಾಖಾ ಕಟ್ಟಡ ಮಾಲೀಕರು ಇವರುಗಳು ಭಾಗವಹಿಸಲಿರುವರು ಎಂದರು.

ಆರ್ಥಿಕ ವರ್ಷ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು ೯೦೪೭ ’ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ ರೂ. ೮.೦೪ ಕೋಟಿ, ಠೇವಣಾತಿಗಳು ರೂ. ೨೨೯.೪೭ ಕೋಟಿ, ನಿಧಿಗಳು ೧೯.೭೮ ಕೋಟಿ, ವಿನಿಯೋಗಗಳು ೫೫.೫೫ ಕೋಟಿ, ಸಾಲಗಳು ರೂ. ೨೧೫.೨೧ ಕೋಟಿ, ಇದ್ದು ವಸೂಲಾತಿ ಶೇಕಡ ೯೫.೦೪ ಆಗಿರುತ್ತದೆ. ೨೦೨೪-೨೫ನೇ ಸಾಲಿನಲ್ಲಿ ರೂ. ೧೧೫೯.೯೧ ಕೋಟಿ ವ್ಯವಹಾರ ನಡೆಸಿ ರೂ. ೫.೦೪ ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೫೯.೬೬ ಕೋಟಿ ಮೀರಿದ್ದು ಅಡಿಟ್ ವರ್ಗೀಕರಣದಲ್ಲಿ ’ಎ’ ತರಗತಿ ಆಗಿರುತ್ತದೆ.

ಪ್ರಸ್ತುತ ತಾ. ೩೧-೦೮-೨೦೨೫ ಕ್ಕೆ ಸಹಕಾರಿಯಲ್ಲಿ ಒಟ್ಟು ೯೧೪೦ ’ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ ರೂ. ೮.೦೫ ಕೋಟಿ, ಠೇವಣಾತಿಗಳು ರೂ. ೨೪೫.೭೦ ಕೋಟಿ, ಸಾಲಗಳು ರೂ. ೨೨೯.೩೩ ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೭೫.೮೦ ಕೋಟಿ ಆಗಿರುತ್ತದೆ ಎಂದರು.

ಸಹಕಾರಿಯು ೨೦೦೬ ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿರುತ್ತದೆ. ಕೇಂದ್ರ ಕಛೇರಿ ಹಾಗೂ ಬಂಟ್ವಾಳ ಬೈಪಾಸ್ ಶಾಖೆಯು ಬೈಪಾಸು ಜಂಕ್ಷನ್‌ನ ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಪುಂಜಾಲ್ ಕಟ್ಟೆ, ಮುಡಿಪು ಹಾಗೂ ಉಪ್ಪಿನಂಗಡಿ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿಯ ೧೮ನೇ ಶಾಖೆಯು ಸಹಾ ಇದೇ ಬರುವ ೧೪-೦೧-೨೦೨೬ರಂದು ಬೋಳಿಯಾರಿನಲ್ಲಿ ಉದ್ಘಾಟನೆಗೊಳ್ಳಲಿದೆ, ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತಿರ್ಮಾನಿಸಿರುತ್ತದೆ. ಸಹಕಾರಿಯಲ್ಲಿ ೬೯ ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ ೪೪ ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್‌ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿಯ ಯೋಜನೆಯಂತೆ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ಸಹಕಾರಿಯ ವತಿಯಿಂದ ೨೦೨೪-೨೫ ನೇ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ ರೂ. ೬,೮೮,೦೦೦.೦೦ ವಿದ್ಯಾರ್ಥಿ ವೇತನ ನೀಡಲಾಗಿರುತ್ತದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಆಳವಡಿಸಲಾಗಿದೆ. ಸಹಕಾರಿಯಲ್ಲಿ ಪ್ರಸ್ತುತ ೨೩೬ ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು ೨೧೨೫ ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದು ಒಟ್ಟು ರೂ. ೮೮,೩೨,೬೩೦.೫೦ ಉಳಿತಾಯವನ್ನು ಮಾಡಿರುತ್ತಾರೆ. ೨೦೨೪-೨೫ ನೇ ಸಾಲಿನಲ್ಲಿ ಗುಂಪುಗಳಿಗೆ ರೂ. ೨,೦೨,೬೬,೦೦೦.೦೦ ಸಾಲವನ್ನು ನೀಡಿದ್ದು ವರ್ಷಾಂತ್ಯಕ್ಕೆ ರೂ. ೨,೧೨,೨೯,೬೭೬.೦೦ ಹೊರಬಾಕಿ ಇರುತ್ತದೆ. ಸಹಕಾರಿಯ ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ರೂ. ೫,೮೪,೦೦೦.೦೦ ನ್ನು ನೀಡಲಾಗಿದೆ.

ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. ರೂ. ೧೦,೦೦೦.೦೦ ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು .

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಎಲ್ಲರಿಗೂ, ಎಲ್ಲೆಡೆಯೂ ಆರೋಗ್ಯ, ಜಾಗೃತಿಗೆ ಬೀದಿನಾಟಕ

ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)

7 hours ago