ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಪಂಚಕ ಸರಣಿ ತಾಳಮದ್ದಳೆಗೆ ಚಾಲನೆಯನ್ನು ಕ್ಷೇತ್ರದ ಅಧ್ಯಕ್ಷ ಲೋಕನಾಥ ಶೆಟ್ಟಿ ನೀಡಿದರು.
ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ವತಿಯಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು, 25ರಂದು ಜಾಂಬವತಿ ಕಲ್ಯಾಣ, 27ರಂದು ಸಂಜೆ ಸುಧನ್ವ ಮೋಕ್ಷ ತಾಳಮದ್ದಳೆ ನಡೆಯಿತು. 29ರಂದು ಗುರುದಕ್ಷಿಣೆ, ಅಕ್ಟೋಬರ್ 1ರಂದು ಶ್ರೀರಾಮ ದರ್ಶನ ಹಾಗೂ 2ರಂದು ಶ್ರೀದೇವಿ ಕೌಶಿಕೆ ತಾಳಮದ್ದಳೆ ನಡೆಯಲಿದೆ ಎಂದು ಈ ಸಂದರ್ಭ ಟ್ರಸ್ಟ್ ಮುಖ್ಯಸ್ಥ ಪ್ರಶಾಂತ್ ಹೊಳ್ಳ ತಿಳಿಸಿದರು.